
ವಾಷಿಂಗ್ಟನ್: ಜಾರ್ಜ್ ಬುಷ್ ಮತ್ತು ಟೋನಿ ಬ್ಲೇರ್ ಅವರು ಅಮೆರಿಕದ ಮೇಲಾದ 9/11ರ ದಾಳಿಯನ್ನು `ತಿರುಚಿ', ಆಫ್ಘಾನ್ ಮೇಲೆ ಯುದ್ಧ ಸಾರಲು ಒಸಾಮ ಬಿನ್ ಲಾಡೆನ್ ಕಾರಣ ಎಂಬಂತೆ ಬಿಂಬಿಸಿದರು.
ಈ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡರು ಎಂದು ಬ್ರಿಟನ್‍ನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಆರೋಪಿಸಿದ್ದಾರೆ. ತಮ್ಮ ಲೇಖನಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ಬುಷ್-ಬ್ಲೇರ್ ನಡೆಸಿದ ಸಂಚುಗಳನ್ನು ವಿವರಿಸಿ ವಿವಾದಕ್ಕೀಡಾಗಿದ್ದಾರೆ ಎಂದು ದಿ ಟೆಲಿ ಗ್ರಾಫ್ ವರದಿ ಮಾಡಿದೆ.
ಈ ಲೇಖನಗಳಿಂದಾಗಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದೋ, ಬೇಡವೋ ಎಂಬ ಚರ್ಚೆಯೂ ಶುರುವಾಗಿದೆ. ಲೇಬರ್ ನಾಯಕನಾಗಿ ಮುಂದುವರಿದರೆ ಪಕ್ಷಕ್ಕೆ ಸೋಲು ಖಚಿತ ಎಂಬುದು ಅನೇಕರ ಅಭಿಪ್ರಾಯ.
Advertisement