ರಾಹುಲ್ ಆ್ಯಸ್ಪನ್‍ನಲ್ಲಿ: ಟ್ವಿಟರಲ್ಲಿ ಫೋಟೋ ಪ್ರತ್ಯಕ್ಷ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದರ ನಡುವೆಯೇ ರಾಹುಲ್ ಅವರ
ಆ್ಯಸ್ಪೆನ್ ನಲ್ಲಿ ಡೇವಿಡ್ ಮಿಲಿಬ್ಯಾಂಡ್ ಜತೆ ರಾಹುಲ್. ಇದನ್ನು ರಾಹುಲ್ ಕಾರ್ಯಾಲಯ ಟ್ವಿಟರ್ನಲ್ಲಿ ಅಪ್ ಲೋಡ್ ಮಾಡಿದೆ.
ಆ್ಯಸ್ಪೆನ್ ನಲ್ಲಿ ಡೇವಿಡ್ ಮಿಲಿಬ್ಯಾಂಡ್ ಜತೆ ರಾಹುಲ್. ಇದನ್ನು ರಾಹುಲ್ ಕಾರ್ಯಾಲಯ ಟ್ವಿಟರ್ನಲ್ಲಿ ಅಪ್ ಲೋಡ್ ಮಾಡಿದೆ.
Updated on: 

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದರ ನಡುವೆಯೇ ರಾಹುಲ್ ಅವರ ಫೋಟೋ ಟ್ವಿಟರ್‍ನಲ್ಲಿ ಪ್ರತ್ಯಕ್ಷವಾಗಿದೆ.

ಕಾಂಗ್ರೆಸ್ ಹೇಳಿಕೊಂಡಂತೆಯೇ ರಾಹುಲ್ ಅವರು ಅಮೆರಿಕದ ಆ್ಯಸ್ಪೆನ್‍ನಲ್ಲಿ ನಡೆದ¸ ಸಮಾವೇಶದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಕಾಂಗ್ರೆಸ್ ನಾಯಕ ಮಿಲಿಂದ್ ದೇವೊರಾ ಅವರು ಈ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಅದರಲ್ಲಿ ರಾಹುಲ್ ಅವರು ಐಸ್ ಲ್ಯಾಂಡ್ ಅಧ್ಯಕ್ಷ ಒಲಾಫರ್ ಗ್ರಿಮ್ಸನ್ ಹಾಗೂ ಬ್ರಿಟನ್‍ನ ರಾಜಕಾರಣಿ ಡೇವಿಡ್ ಮಿಲಿಬ್ಯಾಂಡ್ ಜತೆಗೆ ತೆಗೆದುಕೊಂಡ ಫೋಟೋ ಕೂಡ ಸೇರಿದೆ.

ರಾಹುಲ್ ಅವರು `ವೀಕೆಂಡ್ ವಿದ್ ಚಾರ್ಲಿ ರೋಸ್'ನಲ್ಲಿ ಪಾಲ್ಗೊಳ್ಳಲು ಆ್ಯಸ್ಪನ್‍ಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ಇದನ್ನು ಅಲ್ಲಗಳೆದಿದ್ದ ಬಿಜೆಪಿ, ಈ ಕಾರ್ಯಕ್ರಮ ಜೂನ್-ಜುಲೈನಲ್ಲೇ ಮುಗಿದಿದ್ದು, ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com