ಒಬಾಮ-ಮೋದಿ ಮಾತುಕತೆ, ಸಹಕಾರ ವೃದ್ಧಿಗೆ ಒತ್ತು

ಅಮೆರಿಕ ಪ್ರವಾಸದ ಕೊನೆಯ ದಿನ ವಾದ ಸೋಮವಾರ ಪ್ರಧಾನಿ ಮೋದಿ ಅವರು ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿಯಾಗಿ ಹಲವು...
ನರೇಂದ್ರಾ ಮೋದಿ-ಒಬಾಮ
ನರೇಂದ್ರಾ ಮೋದಿ-ಒಬಾಮ

ಸ್ಯಾನೋಸೆ: ಅಮೆರಿಕ ಪ್ರವಾಸದ ಕೊನೆಯ ದಿನ ವಾದ ಸೋಮವಾರ ಪ್ರಧಾನಿ ಮೋದಿ ಅವರು ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.

ಭದ್ರತೆ, ಉಗ್ರ ನಿಗ್ರಹ, ರಕ್ಷಣೆ, ಸೈಬರ್ ಸೆಕ್ಯೂರಿಟಿ, ಆರ್ಥಿಕತೆ ಮತ್ತು ಹವಾಮಾನ ಬದಲಾವಣೆ ಮತ್ತಿತರ ವಲಯಗಳಲ್ಲಿ ಭಾರತ-ಅಮೆರಿಕ ಪಾಲುದಾರಿಕೆ ಯನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿದರು. ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳ ನಾಯಕರ ನಡುವೆ ನಡೆದ 3ನೇ ಭೇಟಿ ಇದಾಗಿತ್ತು.

ವಿಶ್ವಸಂಸ್ಥೆ ಪ್ರಧಾನ ಕಚೇರಿಯ ಪ್ರವೇಶ ದ್ವಾರದಲ್ಲಿ ಮೋದಿ ಅವರನ್ನು ನೋಡುತ್ತಿದ್ದಂತೆಯೇ ಒಬಾಮ ಹತ್ತಿರ ಬಂದು ಆತ್ಮೀಯವಾಗಿ ಆಲಿಂಗಿಸಿಕೊಂಡರು. ಸ್ವಚ್ಛ ಇಂಧನಕ್ಕೆ ಸಂಬಂಧಿಸಿ ಭಾರತದ ಬದ್ಧತೆಯನ್ನು ಶ್ಲಾಘಿಸುತ್ತೇನೆ ಎಂದು ಒಬಾಮ ನುಡಿದರು.

ಇದೇ ವೇಳೆ, ಪ್ರಧಾನಿ ಮೋದಿ ಅವರು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವದ ಬೇಡಿಕೆಗೆ ಅಮೆರಿಕದ ಬೆಂಬಲ ಕೋರಿದರು. ನಂತರ ಮಾತನಾಡಿದ ಮೋದಿ, ಅಭಿವೃದ್ಧಿಗೆ ಕುಂದು ಉಂಟಾಗದಂತೆ ಹವಾಮಾನ ಬದಲಾವಣೆಯಲ್ಲೂ ಯಾವುದೇ ರಾಜಿಯಿಲ್ಲದೇ ಮುನ್ನಡೆಯುತ್ತಿರುವ ಒಬಾಮ ನಡೆ ಬಗ್ಗೆ ಹೆಮ್ಮೆಯಿದೆ.

ವಿಶ್ವದಲ್ಲಿ ಭಯೋತ್ಪಾದನೆಯ ಅಪಾಯ ಹೆಚ್ಚಾದಂತೆ, ಭಾರತ ಮತ್ತು ಅಮೆರಿಕದ ನಡುವಿನ ರಕ್ಷಣಾ ಸಹಕಾರವೂ ಆಳ ವಾಗುತ್ತಿದೆ ಎಂದರು. ಈ ನಡುವೆ, ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಸಂಬಂಧಿಸಿ ಬಾಕಿಯಿರುವ ಸಮಗ್ರ ಸಮಾವೇಶವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಮೋದಿ ಒತ್ತಾಯಿಸಿದರು.

ನಮ್ಮ ಮಾತುಕತೆಯ ಹೆಚ್ಚಿನ ಭಾಗವು ಪ್ಯಾರಿಸ್‍ನಲ್ಲಿ ನಡೆ ಯಲಿರುವ ಹವಾಮಾನ ಸಮಾವೇಶದ ಕುರಿತಾಗಿತ್ತು ಎಂದು ಮೋದಿ ತಿಳಿಸಿದರು. ಇದಕ್ಕೂ ಮುನ್ನ ಮೋದಿ ಅವರು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮ ರೂನ್ ಮತ್ತು ಫ್ರಾನ್ಸ್ ಅಧ್ಯಕ್ಷ ಹೊಲಾಂಡ್ ಜತೆ ದ್ವಿಪಕ್ಷೀಯ ಮಾತು ಕತೆ ನಡೆಸಿದರು. ಇದೇ ವೇಳೆ, ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಏರಿಂಡಿಯಾದ ಅತಿ ದೂರದ ಯಾನ ಡಿಸೆಂಬರ್ 2ನೇ ವಾರದಿಂದ ಆರಂಭವಾಗಲಿದೆ ಎಂದು ಏರ್‍ಇಂಡಿಯಾ ಘೋಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com