ಟ್ರಂಪ್ ಗೆ ವಿದೇಶಾಂಗ ನೀತಿ ಬಗ್ಗೆ ಹೆಚ್ಚು ತಿಳಿದಿಲ್ಲ: ಬರಾಕ್ ಒಬಾಮ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಅಧ್ಯಕ್ಷ ಬರಾಕ್ ಒಬಾಮ ಪ್ರತಿಕ್ರಿಯೆ ನೀಡಿದ್ದು, ಟ್ರಂಪ್ ಗೆ ವಿದೇಶಾಂಗ ನೀತಿಗಳ ಬಗ್ಗೆ ಹೆಚ್ಚು ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.
ಬರಾಕ್ ಒಬಾಮ
ಬರಾಕ್ ಒಬಾಮ

ವಾಷಿಂಗ್ ಟನ್: ಜಪಾನ್ ಹಾಗೂ ದಕ್ಷಿಣ ಕೊರಿಯಾ ಸ್ವಂತವಾಗಿ ಪರಮಾಣು ಶಸ್ತ್ರಾಗಾರಗಳನ್ನು ಅಭಿವೃದ್ಧಿಪಡಿಸುವುದನ್ನು ಪರಿಗಣಿಸಬೇಕು ಎಂದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಅಧ್ಯಕ್ಷ ಬರಾಕ್ ಒಬಾಮ ಪ್ರತಿಕ್ರಿಯೆ ನೀಡಿದ್ದು, ಟ್ರಂಪ್ ಗೆ ವಿದೇಶಾಂಗ ನೀತಿಗಳ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ ಎಂದಿದ್ದಾರೆ.

ಪರಮಾಣು ಭದ್ರತಾ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬರಾಕ್ ಒಬಾಮ, ಅಮೆರಿಕಾವನ್ನು ಜಪಾನ್ ಹಾಗೂ ದಕ್ಷಿಣ ಕೊರಿಯಾದ ಪರಮಾಣು ಶಸ್ತ್ರಾಗಾರಗಳ ರಕ್ಷಕ ಎಂದರು. ಅಮೆರಿಕಾ ಪರಮಾಣು ಶಸ್ತ್ರಾಸ್ತ್ರಗಳ ಏರಿಕೆ ಮತ್ತು ಸಂಘರ್ಷವನ್ನು ತಪ್ಪಿಸಿದೆ ಎಂದೂ ಸಹ ಅವರು ಹೇಳಿದ್ದಾರೆ.

ಕಳೆದ ವಾರ  ವಿವಾದಾತ್ಮಕ ಪರಮಾಣು ಪ್ರಸ್ತಾವನೆಗಳನ್ನು ಮಂಡಿಸಿದ್ದ ಡೊನಾಲ್ಡ್ ಟ್ರಂಪ್, ಪರಮಾಣು ಪ್ರಸರಣ ವಿಶ್ವದ ಬಹುದೊಡ್ಡ ಸವಾಲಾಗಿದೆ. ಜಪಾನ್ ಹಾಗೂ ದಕ್ಷಿಣ ಕೊರಿಯಾ ತಮ್ಮದೇ ಅದ ಸ್ವಂತ ಪರಮಾಣು ಶಸ್ತ್ರಾಗಾರಗಳನ್ನು ಅಭಿವೃದ್ಧಿಪಡಿಸುವುದನ್ನು ಪರಿಗಣಿಸಬೇಕು ಹಾಗಾದಲ್ಲಿ ಅಮೆರಿಕ ಏಷ್ಯಾದಿಂದ ಕಾಲ್ತೆಗೆಯಬಹುದು ಎಂದು ಸಲಹೆ ನೀಡಿದ್ದರು. ಇನ್ನು ಉಳಿದ ಭಾಗಗಳಲ್ಲಿ ಅಮೆರಿಕದ ಭದ್ರತಾ ಸಂಬಂಧಗಳನ್ನು ಪುನಾರಚನೆ ಮಾಡಬೇಕೆಂಬ ಸಲಹೆಯನ್ನು ಮುಂದಿಟ್ಟಿದ್ದ ಟ್ರಂಪ್, ಸೌದಿ ಅರೇಬಿಯಾ ಹಾಗೂ ಜರ್ಮನಿ ತಮ್ಮದೇ ಅದ ಸ್ವಂತ ರಕ್ಷಣಾ ತಂಡದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಅಥವಾ ಅಲ್ಲಿಗೆ  ಅಮೆರಿಕಾ ನೀಡುತ್ತಿರುವ ಭದ್ರತೆಗೆ ಹೆಚ್ಚು ಹಣ ಪಾವತಿಸಬೇಕು ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com