ತ್ವರಿತ ನ್ಯಾಯಕ್ಕಾಗಿ ಉಗ್ರ ಹಫೀಜ್ ಸಯೀದ್ ನಿಂದ ಷರಿಯತ್ ಕೋರ್ಟ್ ಗಳ ಸ್ಥಾಪನೆ!

ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್ ಸಯೀದ್ ತ್ವರಿತ ನ್ಯಾಯ ವಿತರಣೆಗಾಗಿ ತನ್ನದೇ ಆದ ಷರಿಯಾ ನ್ಯಾಯಾಲಯಗಳನ್ನು ಪ್ರಾರಂಭಿಸಿದ್ದಾನೆ.
ಹಫೀಜ್ ಸಯೀದ್
ಹಫೀಜ್ ಸಯೀದ್

ಲಾಹೋರ್: ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್ ಸಯೀದ್ ತ್ವರಿತ ನ್ಯಾಯ ವಿತರಣೆಗಾಗಿ ತನ್ನದೇ ಆದ ಷರಿಯಾ ನ್ಯಾಯಾಲಯಗಳನ್ನು ಪ್ರಾರಂಭಿಸಿದ್ದಾನೆ. ಈ ಮೂಲಕ ಪಾಕಿಸ್ತಾನದ ಪಂಜಾಬ್ ನ ಪ್ರಾಂತ್ಯದಲ್ಲಿ ಪರ್ಯಾಯ ನ್ಯಾಯಾಂಗ ವ್ಯವಸ್ಥೆ ಜಾರಿಯಲ್ಲಿದೆ.
ಜಮಾತ್- ಉದ್- ದವಾ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಖಾಜಿ (ಷರಿಯಾ ನ್ಯಾಯಾಧೀಶ) ನೇತೃತ್ವದಲ್ಲಿ ಶರಿಯಾ ನ್ಯಾಯಾಲಯವನ್ನು ಪ್ರಾರಂಭಿಸಲಾಗಿದ್ದು, ದೂರುಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ. ಷರಿಯಾ ಆಧಾರಿತ ನ್ಯಾಯಾಂಗ ವ್ಯವಸ್ಥೆಗೆ ದಾರುಲ್ ಖಾಜಾ ಷರಿಯಾ ಎಂದು ಹೆಸರಿಸಲಾಗಿದ್ದು ಲಾಹೋರ್ ನಲ್ಲಿರುವ ಜನರ ಆಸ್ತಿ ಹಾಗೂ ಹಣಕಾಸಿನ ದೂರುಗಳನ್ನು ಇತ್ಯರ್ಥಗೊಳಿಸಲಾಗುತ್ತದೆ. 
ಆರೋಪಿ ಷರಿಯಾ ನ್ಯಾಯಾಲಯದ ಸಮನ್ಸ್ ಗೆ ಸ್ಪಂದಿಸದೇ ಇದ್ದರೆ ಷರಿಯಾ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗುತ್ತದೆ ಎಂದಿರುವ ಜೆಯುಡಿ ವಕ್ತಾರ ಷರಿಯಾ ನ್ಯಾಯಾಲಯಗಳ ಸ್ಥಾಪನೆಯನ್ನು ಸಮರ್ಥಿಸಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com