ಜೆಇಎಂ ಮುಖ್ಯಸ್ಥ ಸೇರಿ ನಾಲ್ವರ ವಿರುದ್ಧ ಬಂಧನ ವಾರೆಂಟ್ ಜಾರಿ

ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ವಿರುದ್ಧ ರಾಷ್ಟ್ರೀಯ...
ಜೈಶ್-ಇ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್
ಜೈಶ್-ಇ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್
ಮೊಹಲಿ: ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ವಿರುದ್ಧ ರಾಷ್ಟ್ರೀಯ ತನಿಖಾ ತಂಡ(ಎನ್ ಐಎ)ದ ವಿಶೇಷ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ. 
ಎನ್ ಐಎ ನ ವಿಶೇಷ ಕೋರ್ಟ್ ನ ನ್ಯಾಯಾಧೀಶ ಟಿಪಿ ಸಿಂಗ್ ಅವರು ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜಾರ್, ಆತನ ಸಹೋದರ ಅಬ್ದುಲ್ ರಾಫ್, ಪಠಾಣ್ ಕೋಟ್ ದಾಳಿಯು ಮುಖ್ಯ ರುವಾರಿಗಳಾದ ಕಶಿಫ್ ಜಾನ್ ಮತ್ತು ಶೈದ್ ಲಾಟಿಫ್ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದ್ದಾರೆ. 
ಪಠಾಣ್ ಕೋಟ್ ದಾಳಿ ಹಿಂದೆ ಇಬ್ಬರು ಉಗ್ರರು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹಾಗೂ ಇನ್ನಿಬ್ಬರು ಫಿದಾಯಿನ್ ಸಂಘಟನೆಗೆ ಸೇರಿದ ಉಗ್ರರೆಂದು ಹೇಳಿತ್ತು. ಕಶಿಫ್ ಜಾನ್ ಮತ್ತು ಶಾಹಿದ್ ಲಾಟಿಫ್ ಸೇರಿದಂತೆ ಜೈಶ್ ಸಂಘಟನೆಯ ನಾಯಕರು ದಾಳಿ ಸಂಬಂಧ ಸಂಭಾಷಣೆ ನಡೆಸಿರುವ ರೆಕಾರ್ಡಿಂಗಳನ್ನು ಎನ್ ಐಎ ಕೋರ್ಟ್ ಗೆ ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಇವರ ವಿರುದ್ಧ ನ್ಯಾಯಾಧೀಶರು ಬಂಧನ ವಾರೆಂಟ್ ಜಾರಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com