
ಮಾಯನ್ಮಾರ್: ಮಾಯನ್ಮಾರ್ ನಲ್ಲಿ 61 ರಾಜಕೀಯ ಖೈದಿಗಳನ್ನು ಬಂಧಮುಕ್ತಗೊಳಿಸಲಾಗಿದೆ. ರಾಜಕೀಯ ಖೈದಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದಿರುವುದರ ಪರಿಣಾಮ ರಾಜಕೀಯ ಖೈದಿಗಳನ್ನು ಬಂಧಮುಕ್ತಗೊಳಿಸಲಾಗಿದೆ.
61 ರಾಜಕೀಯ ಖೈದಿಗಳ ಬಿಡುಗಡೆ ಮೂಲಕ, ಬಂಧಮುಕ್ತಗೊಂಡಿರುವ ರಾಜಕೀಯ ಖೈದಿಗಳ ಒಟ್ಟು ಸಂಖ್ಯೆ 199 ಕ್ಕೇರಿದೆ. ಮಾಯನ್ಮಾರ್ ನಲ್ಲಿ ಹೊಸ ವರ್ಷ ಆಚರಣೆಗೆ ಇನ್ನೊಂದು ವಾರವಿದ್ದು ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಿಸಲು ಕೌನ್ಸಿಲರ್ ಆಗಿರುವ ಆಂಗ್ ಸ್ಯಾನ್ ಸೂ ಕೀ ಅವರು ಯತ್ನಿಸಿದ್ದರು. ಮಾ.30 ರಂದು ಮಾಯನ್ಮಾರ್ ನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲನೇ ಬಾರಿಗೆ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Advertisement