ಆಶ್ರಯ ಪಡೆಯುವ ಸೋಗಿನಲ್ಲಿ ಯೂರೋಪ್ ಗೂ ನುಗ್ಗಿದ ಮುಂಬೈ ದಾಳಿಯ ನಂಟಿರುವ ಉಗ್ರರು!

2008 ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಉಗ್ರರು ಆಶ್ರಯ ಪಡೆಯುವ ಸೋಗಿನಲ್ಲಿ ಯೂರೋಪ್ ಗೆ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಮುಂಬೈ ದಾಳಿ
ಮುಂಬೈ ದಾಳಿ

ಯುರೋಪ್: 2008 ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಉಗ್ರರು ಆಶ್ರಯ ಪಡೆಯುವ ಸೋಗಿನಲ್ಲಿ ಯೂರೋಪ್ ಗೆ  ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಆಸ್ಟ್ರೀಯಾದಲ್ಲಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸುತ್ತಿದ್ದವರನ್ನು ಬಂಧಿಸಿದ ನಂತರ ಈ ಮಾಹಿತಿ ಬಹಿರಂಗವಾಗಿದ್ದು, ಮುಂಬೈ ದಾಳಿ ಪ್ರಕರಣದಲ್ಲಿ ಭಾಗಿಯಾದವರೇ ಯೂರೋಪ್ ನಲ್ಲೂ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಇಸೀಸ್ ಉಗ್ರ ಸಂಘಟನೆಯ ಪರವಾಗಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪ್ದಡಿ ಸಾಲ್ಜ್ ಬರ್ಗ್ ನಲ್ಲಿ 2015 ರ ಡಿಸೆಂಬರ್ ನಲ್ಲಿ ಬಂಧಿಸಲಾದ ವ್ಯಕ್ತಿಯನ್ನು ಮೊಹಮ್ಮದ್ ಘನಿ ಉಸ್ಮಾನ್ ಎಂದು ಗುರುತಿಸಲಾಗಿದೆ. ಬಂಧಿತ ವ್ಯಕ್ತಿ ಲಷ್ಕರ್ ಉಗ್ರ ಸಂಘಟನೆಗೆ ಬಾಂಬ್ ಗಳನ್ನು ತಯಾರಿಸುತ್ತಿದ್ದ ಹಾಗೂ ಆಶ್ರಯ ಪಡೆಯುವ ಸೋಗಿನಲ್ಲಿ ಯೂರೋಪ್ ಪ್ರವೇಶಿಸಿ ಅಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಎಂದು ತಿಳಿದುಬಂದಿದೆ.
ಮೊಹಮ್ಮದ್ ಘನಿ ಉಸ್ಮಾನ್ ನಂತೆಯೇ ಆಶ್ರಯ ಪಡೆಯುವ ಸೋಗಿನಲ್ಲಿ ಹಲವು ಉಗ್ರರು ಯುರೋಪ್ ನ್ನು ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com