ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಇಸ್ಲಾಮಿಕ್ ಸಹಕಾರ ಸದಸ್ಯ ರಾಷ್ಟ್ರಗಳ ಪ್ರತಿಜ್ಞೆ

ಇಸ್ಲಾಮಿಕ್ ಸಹಕಾರ ಸಂಘದ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆ, ತೀವ್ರವಾದವನ್ನು ಮಣಿಸುವ ಪ್ರತಿಜ್ಞೆ ಮಾಡಿವೆ.
ಒಐಸಿ
ಒಐಸಿ

ಇಸ್ತಾಂಬುಲ್: ಇಸ್ಲಾಮಿಕ್ ಸಹಕಾರ ಸಂಘದ ಸದಸ್ಯ ರಾಷ್ಟ್ರಗಳು (ಒಐಸಿ) ಭಯೋತ್ಪಾದನೆ, ತೀವ್ರವಾದವನ್ನು ಮಣಿಸುವ ಪ್ರತಿಜ್ಞೆ ಮಾಡಿವೆ.
ಇಸ್ಲಾಂ ನ ಬೋಧನೆಗಳನ್ನು ತಪ್ಪಾಗಿ ಅರ್ಥೈಸುತ್ತಿರುವ ಭಯೋತ್ಪಾದಕರು ಹಾಗೂ ತೀವ್ರವಾದಿಗಳ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ, ಸಹಿಷ್ಣುತೆಯನ್ನು ಪಾಲಿಸುವುದೇ ಇಸ್ಲಾಂ ನ ನೈಜ ಲಕ್ಷಣ ಎಂದು ಇಸ್ಲಾಮಿಕ್ ಸಹಕಾರ ಸಂಘದ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಈಜಿಪ್ಟ್ ನ ವಿದೇಶಾಂಗ ಇಲಾಖೆಯ ಉಪಸಚಿವ ಹಿಶಾಮ್ ಬದ್ರ್ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಡಲು ಇಸ್ಲಾಮಿಕ್ ಜಗತ್ತಿಗೆ ಆಧುನೀಕರಣ ಹಾಗೂ ಒಗ್ಗಟ್ಟಿನ ಕಾರ್ಯತಂತ್ರದ ಅವಶ್ಯಕತೆ ಇದೆ ಎಂದು ಬದ್ರ್ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಎಲ್ಲಾ ತ್ಯಾಗಗಳ ನಡುವೆಯೂ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಜಯಗಳಿಸುತ್ತೇವೆ ಎಂದು ಬದ್ರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಆಗನೈಸೇಶನ್ ಆಫ್ ಇಸ್ಲಾಮಿಕ್ ಕೋ ಆರ್ಡಿನೇಶನ್ (ಒಐಸಿ) ಯ 13 ನೇ ಸಮ್ಮೇಳನದಲ್ಲಿ ಸೌದಿ ಅರೇಬಿಯಾದ ರಾಜ ಸಲ್ಮಾನ್  ಬಿನ್ ಅಬ್ದುಲಾಜೀಜ್ ಹಾಗೂ ಇರಾನ್ ನ ಅಧ್ಯಕ್ಷ ಹಸನ್ ರೌಹಾನಿ ಸೇರಿದಂತೆ ೫೦ ದೇಶಗಳ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com