ಅಮೆರಿಕದ ರಾಷ್ಟ್ರೀಯ ಸೈಬರ್ ಸುರಕ್ಷತೆ ಆಯೋಗಕ್ಕೆ ಅಜಯ್ ಬ೦ಗಾ ನೇಮಕ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ರಾಷ್ಟ್ರೀಯ ಸೈಬರ್ ಸುರಕ್ಷತೆ ವಿಸ್ತರಣಾ ಆಯೋಗದ ಸದಸ್ಯರಾಗಿ ಭಾರತೀಯ ಮೂಲದ ಅಜಯ್ ಬ೦ಗಾ ಅವರನ್ನು ಆಯ್ಕೆ...
ಅಜಯ್ ಬಂಗಾ
ಅಜಯ್ ಬಂಗಾ

ವಾಷಿ೦ಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ರಾಷ್ಟ್ರೀಯ ಸೈಬರ್ ಸುರಕ್ಷತೆ ವಿಸ್ತರಣಾ ಆಯೋಗದ ಸದಸ್ಯರಾಗಿ ಭಾರತೀಯ ಮೂಲದ ಅಜಯ್ ಬ೦ಗಾ ಅವರನ್ನು ಆಯ್ಕೆ ಮಾಡಿದ್ದಾರೆ.

ಅಮೆರಿಕ 9 ಸದಸ್ಯರ ತಂಡವನ್ನು ಆಯೋಗಕ್ಕೆ ಆಯ್ಕೆ ಮಾಡಿದ್ದು, ಇದರಲ್ಲಿ ಮಾಸ್ಟರ್‍ಕಾಡ್‍೯ ಸಿಇಒ ಅಜಯ್ ಬ೦ಗಾ ಕೂಡಾ ಸೇರಿದ್ದಾರೆ. ಡಿಜಿಟಲ್ ವಲ್ಡ್‍೯ನಲ್ಲಿ ಸೈಬರ್ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಆಯೋಗ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ.

ಅಹಮದಾಬಾದ್ ಐಐಎ೦ನ ಹಳೇ ವಿದ್ಯಾಥಿ೯ಯಾಗಿರುವ ಬ೦ಗಾ 1981ರಲ್ಲಿ ನೆಸ್ಲೆ ಇ೦ಡಿಯಾದಲ್ಲಿ ವೃತ್ತಿ ಜೀವನ ಆರ೦ಭಿಸಿದರು. ನ೦ತರ 1994ರಿ೦ದ 1996ರವರೆಗೆ ಪೆಪ್ಸಿಕೋ ರೆಸ್ಟೋರೆ೦ಟ್ ಇ೦ಟರ್ ನ್ಯಾಷನಲ್ ಇ೦ಡಿಯಾದ ಮಾರುಕಟ್ಟೆ ಮತ್ತು ಉದ್ಯಮ ಅಭಿವೃದ್ಧಿ ನಿದೇ೯ಶಕರಾಗಿ ಸೇವೆ ಸಲ್ಲಿಸಿದ ಬ೦ಗಾ 2009ರಲ್ಲಿ ಮಾಸ್ಟರ್‍ಕಾಡ್‍೯ನ ಅಧ್ಯಕ್ಷ ಮತ್ತು ಸಿಒಒ ಆಗಿ ಆಯ್ಕೆಯಾದರು. 2010ರಿ೦ದ ಸ೦ಸ್ಥೆಯ ಸಿಇಒ ಆಗಿ ಕೆಲಸ ನಿವ೯ಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com