'ವಿಜಯ್ ಮಲ್ಯ ವ್ಯವಹಾರ ಯಾವ ಮಾದರಿಯದ್ದು?' ಅರುಣ್ ಜೇಟ್ಲಿ ಪ್ರಶ್ನೆ

ವೈಮಾನಿಕ ವಲಯ ಉದ್ದಿಮೆಗಳು ಭಾರತದಲ್ಲಿ ಲಾಭದಲ್ಲಿ ವ್ಯವಹಾರ ನಡೆಸುತ್ತಿರುವಾಗ ವಿಜಯ್ ಮಲ್ಯ...
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ವಾಷಿಂಗ್ಟನ್: ವೈಮಾನಿಕ ವಲಯ ಉದ್ದಿಮೆಗಳು ಭಾರತದಲ್ಲಿ ಲಾಭದಲ್ಲಿ ವ್ಯವಹಾರ ನಡೆಸುತ್ತಿರುವಾಗ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಏರ್ ಲೈನ್ಸ್ ನಷ್ಟದತ್ತ ಹೋಗಲು ಕಾರಣವೇನು, ಅವರು ಯಾವ ಮಾದರಿಯ ವ್ಯವಹಾರ ನಡೆಸುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಶ್ನೆ ಮಾಡಿದ್ದಾರೆ.

''ನಾನು ಈ ಬಗ್ಗೆ ಅಂತಿಮ ಅಭಿಪ್ರಾಯ ನೀಡುತ್ತಿಲ್ಲ. ಇದು ಒಂದು ನಿರ್ದಿಷ್ಟ ಕಂಪನಿಯ ವ್ಯವಹಾರ ಮಾದರಿಯ ಕಾರಣವಾಗಿರಬಹುದು ಎಂದು ವಾಷಿಂಗ್ಟನ್ ನಲ್ಲಿ ನಿನ್ನೆ ವಿಜಯ್ ಮಲ್ಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.

ವಿಜಯ್ ಮಲ್ಯ ಅವರು ಬ್ಯಾಂಕುಗಳಿಗೆ ಕಟ್ಟಬೇಕಾದ ಹಣವನ್ನು ಮರಳಿಪಡೆಯುವ ಬಗ್ಗೆ ಉತ್ತರಿಸಿದ ಸಚಿವರು ಬ್ಯಾಂಕುಗಳು ಹಣ ಮರಳಿ ಪಡೆಯಲು ಎಲ್ಲಾ ಸಾಧ್ಯತೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೆಲವು ದಂಡನೆ ನಿಬಂಧನೆಗಳನ್ನು ಉಲ್ಲಂಘನೆಯಾಗಿವೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿವೆ ಎಂದರು.

ವಿಜಯ್ ಮಲ್ಯರ ರಾಯಭಾರ ಪಾಸ್ ಪೋರ್ಟ್ ನ್ನು ನಾಲ್ಕು ವಾರಗಳವರೆಗೆ ವಿದೇಶಾಂಗ ಸಚಿವಾಲಯ ಅಮಾನತುಗೊಳಿಸಿದ ಸಂದರ್ಭದಲ್ಲಿ ಅರುಣ್ ಜೇಟ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮಲ್ಯ ಕೇಸಿನಲ್ಲಿ ಸರ್ಕಾರಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂದು ನನಗನಿಸುತ್ತದೆ. ಅವರಿಗೆ ಸಂಬಂಧಪಟ್ಟ ಅನೇಕ ಕೇಸುಗಳು ಕೋರ್ಟ್ ಗಳಲ್ಲಿ ಇತ್ಯರ್ಥವಾಗಬೇಕಿದೆ. ಅವರು ಭಾರತದಲ್ಲಿದ್ದಾಗ ಸಾಲವನ್ನು ಹಿಂಪಡೆಯಲು ಬ್ಯಾಂಕುಗಳು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದವು ಎಂದರು.

ಕಿಂಗ್ ಫಿಶರ್ ಏರ್ ಲೈನ್ಸ್ ಸೇರಿದಂತೆ ಅನೇಕ ಕಂಪೆನಿಗಳ ಮಾಲೀಕರಾಗಿರುವ ಮಲ್ಯ ಸುಮಾರು 9 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದು ಜಾರಿ ನಿರ್ದೇಶನಾಲಯದ ಸಮನ್ಸ್ ಧಿಕ್ಕರಿಸಿ ಪ್ರಸ್ತುತ ಲಂಡನ್ ನಲ್ಲಿದ್ದಾರೆ. ಮೂರು ಬಾರಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಲ್ಲಿ ವಿಫಲರಾದ ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com