
ಲಾಹೋರ್: ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್ ವಿದೇಶದಲ್ಲಿ ಯಾವುದೇ ರೀತಿಯ ಆಸ್ತಿ ಹೊಂದಿಲ್ಲ ಎಂದು ಪಾಕ್ ಚುನಾವಣಾ ಆಯೋಗ ಹೇಳಿದೆ.
ನವಾಜ್ ಷರೀಫ್ ಅವರು ವಿದೇಶದಲ್ಲಿ ಆಸ್ತಿ ಹೊಂದಿಲ್ಲ, ಆದರೆ ಬ್ರಿಟನ್ ನಲ್ಲಿ ನೆಲೆಸಿರುವ ಅವರ ಪುತ್ರ ಹುಸೇನ್ ನವಾಜ್ ರಿಂದ ಹಣ ಪಡೆಯುತ್ತಾರೆ ಎಂದು ಆಯೋಗ ಹೇಳಿದೆ.
ಪನಾಮಾ ಪೇಪರ್ಸ್ ಲೀಕ್ ಸಂಬಂಧ ನವಾಜ್ ಷರೀಫ್ ಅವರ ಆಸ್ತಿಯನ್ನು ಮೌಲ್ಯ ಮಾಡಿರುವ ಆಯೋಗ, ಶರೀಫ್ ಮತ್ತು ಅವರ ಪತ್ನಿ ಬಳಿ 2 ಬಿಲಿಯನ್ ಇದ್ದು, ನಾಲ್ಕು ವರ್ಷಗಳಲ್ಲಿ ಕೋಟಿ ಹಣ ಹೆಚ್ಚಾಗಿದೆ.
2011 ರಲ್ಲಿ 166 ಮಿಲಿುಯನ್ ಇದ್ದ ಹಣ 2014 ರ ವೇಳೆಗೆ 2 ಬಿಲಿಯನ್ ನಷ್ಟು ಆಗಿದೆ. 2015 ರಲ್ಲಿ ತಮ್ಮ ಪುತ್ರ ಹುಸೇನ್ ನವಾಜ್ ಬಳಿ 215 ಮಿಲಿಯನ್ ಹಣ ಪಡೆದು ಬಿಲಿಯನೇರ್ ಆಗಿದ್ದಾರೆ
ಶರೀಫ್ ಬಳಿ ಟಯೋಟಾ ಲ್ಯಾಂಡ್ ಕ್ರೂಸರ್ ಹಾಗೂ ಎರಡು ಮರ್ಸಿಡಿಸ್ ವಾನಹಗಳಿವೆ, ಅವರ ತಾಯಿ ನೀಡಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಪಾಕ್ ಚುನಾವಣಾ ಆಯೋಗ ಷರೀಫ್ ಆಸ್ತಿಯ ವಿವರವನ್ನು ಬಹಿರಂಗ ಪಡಿಸಿದೆ.
Advertisement