ಸ್ಯಾನ್ ಬರ್ನಾರ್ಡಿನೊ ದಾಳಿಯ ಉಗ್ರನ ಐಫೋನ್‌ ತೆರೆದು ನೋಡಲು ಎಫ್ ಬಿಐ ವ್ಯಯಿಸಿದ್ದು 1 ಮಿಲಿಯನ್ ಡಾಲರ್!

ಉಗ್ರನ ಐಫೋನ್ ತೆರೆದು ನೋಡಲು ಎಫ್ ಬಿಐ ಬರೋಬ್ಬರಿ 1 ಮಿಲಿಯನ್ ಡಾಲರ್ ವ್ಯಯಿಸಿದೆ ಎನ್ನುವುದು ಹೊಸ ಸುದ್ದಿ.
ಸ್ಯಾನ್ ಬರ್ನಾರ್ಡಿನೊ ದಾಳಿಯ ಉಗ್ರನ ಐಫೋನ್‌ ತೆರೆದು ನೋಡಲು ಎಫ್ ಬಿಐ ವ್ಯಯಿಸಿದ್ದು 1 ಮಿಲಿಯನ್ ಡಾಲರ್!
ಸ್ಯಾನ್ ಬರ್ನಾರ್ಡಿನೊ ದಾಳಿಯ ಉಗ್ರನ ಐಫೋನ್‌ ತೆರೆದು ನೋಡಲು ಎಫ್ ಬಿಐ ವ್ಯಯಿಸಿದ್ದು 1 ಮಿಲಿಯನ್ ಡಾಲರ್!

ವಾಷಿಂಗ್ ಟನ್: ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊದಲ್ಲಿ ಗುಂಡಿನ ದಾಳಿ ನಡೆಸಿ 4 ಮಂದಿಯನ್ನು ಹತ್ಯೆಗೈದಿದ್ದ ಉಗ್ರನ ಐಫೋನ್ ತೆರೆದು ನೋಡಲು( ಫೋನ್ ನಲ್ಲಿದ್ದ ರಹಸ್ಯ ಡೇಟಾ ಸಂಗ್ರಹಿಸಲು) ಎಫ್ ಬಿಐ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಉಗ್ರನ ಆಪಲ್  ಫೋನ್ ನನ್ನು ಹ್ಯಾಕ್ ಮಾಡಿದ್ದು ಗೊತ್ತೇ ಇದೆ. ಇದಕ್ಕಾಗಿ ಎಫ್ ಬಿಐ ಬರೋಬ್ಬರಿ 1 ಮಿಲಿಯನ್ ಡಾಲರ್ ವ್ಯಯಿಸಿದೆ ಎನ್ನುವುದು ಹೊಸ ಸುದ್ದಿ.
ಇದೆ ಮೊದಲ ಬಾರಿಗೆ ಹೈಪ್ರೋಫಿಲ್- ಪ್ರಕರಣದಲ್ಲಿ ಹೆಚ್ಚು ಹಣ ವ್ಯಯಿಸಿದೆ ಎಂದು ವಾಷಿಂಗ್ ಟನ್ ಪೋಸ್ಟ್ ವರದಿ ಮಾಡಿದೆ. ಎಫ್ ಬಿಐ ನ ನಿರ್ದೇಶಕ  ಐಫೋನ್ ನಲ್ಲಿರುವ ಡೇಟಾ ಪಡೆಯಲು ಹ್ಯಾಕ್ ಮಾಡಲು ವ್ಯಯಿಸಿದ ಬೆಲೆಯನ್ನು ನೇರವಾಗಿ ಹೇಳಿಲ್ಲವಾದರೂ "ನಾನು ಏಳು ವರ್ಷ 4 ತಿಂಗಳಲ್ಲಿ ಪಡೆಯಬಹುದಾದ ವೇತನದಷ್ಟು ಹಣವನ್ನು ವ್ಯಯಿಸಲಾಗಿದೆ" ಎಂದು ಎಫ್ ಬಿಐ ನ ನಿರ್ದೇಶಕ ಜೇಮ್ಸ್ ತಿಳಿಸಿದ್ದಾರೆ. ಎಫ್ ಬಿಐ ನಿರ್ದೇಶಕ ಜೇಮ್ಸ್  ಕೋಮಿ ಅವರು  ವಾರ್ಷಿಕ 185 ,100 ಡಾಲರ್  ವೇತನ ಪಡೆಯುತ್ತಾರೆ. ಜೇಮ್ಸ್ ಕೋಮಿ ಹೇಳಿಕೆ ಆಧಾರದಲ್ಲಿ ಐಫೋನ್‌ ತೆರೆದು ನೋಡಲು ಎಫ್ ಬಿಐ ವ್ಯಯಿಸಿದ್ದು 1 ಮಿಲಿಯನ್ ಡಾಲರ್  ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com