
ಇಸ್ಲಾಮಾಬಾದ್: ಪಾಕ್ ಪ್ರಧಾನಮಂತ್ರಿ ನವಾಜ್ ಷರೀಪ್ ಮತ್ತು ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ನಡುವೆ ಹೆಚ್ಚಿರುವ ಶೀತಲ ಸಮರದ ಮಧ್ಯೆ ಷರೀಫ್ ಪ್ರಧಾನಿ ಸ್ಥಾನದಿಂದ ತಮ್ಮನ್ನು ಕಿತ್ತೊಗೆಯಲು ಸಂಚು ನಡೆಸುತ್ತಿರವವರನ್ನು ತರಾಟೆಗೆ ತೆಗೆದುಕೊಂಡರು.
ನಾನು ಅಲ್ಲಾ ಮತ್ತು ಅವಾಮ್, ದೇವರು ಮತ್ತು ಜನರಿಗೆ ಮಾತ್ರ ತಲೆಬಾಗುತ್ತೇನೆ. ತಮ್ಮ ಮತ್ತು ಕುಟುಂಬದ ವಿರುದ್ಧ ವಿದೇಶಿ ಖಾತೆಗಳನ್ನು ಹೊಂದಿರುವ ಪನಾಮಾ ಬಹಿರಂಗ ಕುರಿತು ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.
ಟಿವಿ ಸಂದರ್ಶನವೊಂದರಲ್ಲಿ 6 ಮಂದಿ ಉನ್ನತ ಸೇನಾಧಿಕಾರಿಗಳನ್ನು ರಹೀಲ್ ವಜಾ ಮಾಡಿದ ಬಳಿಕ ಭ್ರಷ್ಟಾಚಾರವನ್ನು ಬೇರುಸಮೇತ ಕೀಳುವ ತನಕ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗುವುದಿಲ್ಲ ಎಂಬ ಹೇಳಿಕೆಯು ಪ್ರಧಾನಿಯನ್ನು ಗುರಿಯಾಗಿಸಿ ಹೇಳಲಾಗಿತ್ತೆಂದು ಭಾವಿಸಲಾಗಿತ್ತು.
ಸೇನಾ ಮುಖ್ಯಸ್ಥರು 6 ಮಂದಿ ಉನ್ನತ ಸೇನಾಧಿಕಾರಿಗಳನ್ನು ವಜಾ ಮಾಡಿದ ಮರುದಿನವೇ ನವಾಜ್ ಷರೀಪ್ ಸಾರ್ವಜನಿಕ ಹೇಳಿಕೆ ನೀಡಿ ತಮ್ಮನ್ನು ಸಮರ್ಥಿಸಿಕೊಂಡಿದ್ದರು. ಸೇನಾಧಿಕಾರಿಗಳನ್ನು ವಜಾ ಮಾಡಿದ ದಿನ ಜನರಲ್, ಪ್ರಸಕ್ತ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭ್ರಷ್ಟಾಚಾರವನ್ನು ಬೇರುಸಹಿತ ಕೀಳದಿದ್ದರೆ ಈ ಹೋರಾಟವು ಶಾಂತಿ ಮತ್ತು ಸ್ಥಿರತೆಯನ್ನು ಮೂಡಿಸುವುದಿಲ್ಲ ಎಂದಿದ್ದರು.
Advertisement