
ವಾಷಿಂಗ್ ಟನ್: ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಹೋರಾಡಲು ಸಿರಿಯಾದಲ್ಲಿರುವ ಸ್ಥಳೀಯ ಸೇನೆಗೆ ನೆರವು ನೀಡುವುದಕ್ಕಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ 250 ಸೇನಾ ತುಕಡಿಗಳನ್ನು ಸಿರಿಯಾಗೆ ಕಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆಯಾಗಲಿದೆ ಎಂದು ಯುಎಸ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿರುವ ವರದಿಯೊಂದರ ಪ್ರಕಾರ, ಸೇನಾ ತುಕಡಿಗಳ ಜಮಾವಣೆಯನ್ನು ಬರಾಕ್ ಒಬಾಮ ಅಧಿಕೃತಗೊಳಿಸಿದ್ದು, ಈಗಿರುವ 50 ತುಕಡಿಗಳು 300 ಕ್ಕೆ ಏರಿಕೆಯಾಗಳಿವೆ ಎಂದು ಹೇಳಲಾಗಿದೆ.
ಇಸೀಸ್ ಉಗ್ರರ ವಿರುದ್ಧ ಹೋರಾಡಲು ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಷ್ಟವಿಲ್ಲದಿದ್ದರೂ ಬರಾಕ್ ಒಬಾಮ ಸಿರಿಯಾದಲ್ಲಿ ಸೇನಾ ತುಕಡಿಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಜರ್ಮನಿಗೆ ಭೇಟಿ ನೀಡಿರುವ ಅಮೆರಿಕಾ ಅಧ್ಯಕ್ಷರು ಸಿರಿಯಾದಲ್ಲಿ ಸೇನಾ ತುಕಡಿಯ ಸಂಖ್ಯೆಯನ್ನು ಹೆಚ್ಚಿಸುವುದರ ಬಗ್ಗೆ ಹ್ಯಾನೋವರ್ನಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
Advertisement