ನೇಪಾಳದ ಪ್ರಧಾನಿ ಹುದ್ದೆಗೆ ಚುನಾವಣೆ: ಉಮೇದುವಾರಿಕೆ ಸಲ್ಲಿಸಿದ ಪ್ರಚಂಡ

ಆಗಸ್ಟ್. 3 ರಂದು ನೇಪಾಳದಲ್ಲಿ ಪ್ರಧಾನಿ ಹುದ್ದೆಗೆ ಮತದಾನ ನಡೆಯಲಿದ್ದು ನೇಪಾಳದ ಕಮ್ಯುನಿಷ್ಟ್ ಪಕ್ಷ( ಮಾವೋ ಕೇಂದ್ರ) ದ ಅಧ್ಯಕ್ಷ ಪುಷ್ಪ್ ಕಮಲ್ ದಹಲ್ (ಪ್ರಚಂಡ) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನೇಪಾಳದ ಪ್ರಧಾನಿ ಹುದ್ದೆಗೆ ಚುನಾವಣೆ: ಉಮೇದುವಾರಿಕೆ ಸಲ್ಲಿಸಿದ ಪ್ರಚಂಡ
ನೇಪಾಳದ ಪ್ರಧಾನಿ ಹುದ್ದೆಗೆ ಚುನಾವಣೆ: ಉಮೇದುವಾರಿಕೆ ಸಲ್ಲಿಸಿದ ಪ್ರಚಂಡ

ಕಠ್ಮಂಡು: ಆಗಸ್ಟ್. 3 ರಂದು ನೇಪಾಳದಲ್ಲಿ ಪ್ರಧಾನಿ ಹುದ್ದೆಗೆ ಮತದಾನ ನಡೆಯಲಿದ್ದು ನೇಪಾಳದ ಕಮ್ಯುನಿಷ್ಟ್ ಪಕ್ಷ( ಮಾವೋ ಕೇಂದ್ರ) ದ ಅಧ್ಯಕ್ಷ ಪುಷ್ಪ್ ಕಮಲ್ ದಹಲ್ (ಪ್ರಚಂಡ) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿರುವ ಪ್ರಚಂಡ, ಪುಷ್ಪ್ ಕಮಲ್ ದಹಲ್ ಗೆ ನೇಪಾಳ ಕಾಂಗ್ರೆಸ್ ಅಧ್ಯಕ್ಷ ಶೀರ್ ಬಹಾದ್ದೂರ್ ದೇವುಬಾ, ಮಾವೋವಾದಿ ನಾಯಕ ಕೃಷ್ಣ ಬಹಾದ್ದೂರ್ ಮಹಾರ ಹಾಗೂ ಮದೇಶಿ ಜನಾಂಗದ  ಉಪೇಂದ್ರ ಯಾದವ್ ಬೆಂಬಲ ನೀಡಿದ್ದಾರೆ.

ನೇಪಾಳ ಪ್ರಧಾನಿ ಹುದ್ದೆಗೆ ಪ್ರಚಂಡ ಏಕೈಕ ಅಭ್ಯರ್ಥಿಯಾಗಿದ್ದಾರೆ. ನೇಪಾಳದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿರುವ ನೇಪಾಳದ ಕಮ್ಯುನಿಷ್ಟ್ ಪಕ್ಷ (ಯುಎಂಎಲ್) ಪ್ರಚಂಡ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಪಕ್ಷದಿಂದ ಯಾರನ್ನು ಕಣಕ್ಕಿಳಿಸದಂತೆ ತೀರ್ಮಾನ ಕೈಗೊಂಡಿತ್ತು. ಇನ್ನು ಪ್ರತಿಭಟನಾ ನಿರತ ಮದೇಶಿ ಜನಾಂಗವೂ ಸಹ ಪ್ರಚಂಡ ಉಮೇದುವಾರಿಕೆ ಬೆಂಬಲ ಸೂಚಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com