ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಐಸಿಸ್ ನ ತರಬೇತಿ ಶಿಬಿರವಾಗಿದ್ದ ಸದ್ದಾಂನ ಮೊಸುಲ್ ಅರಮನೆ ಮೇಲೆ ಬಾಂಬ್ ದಾಳಿ

ಸದ್ಯಕ್ಕೆ ಇಸ್ಲಾಮಿಕ್ ಸ್ಟೇಟ್ ನ ತರಬೇತಿ ಕೇಂದ್ರವಾಗಿರುವ ಮೃತ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಉತ್ತರ ಇರಾಕ್ ನಲ್ಲಿ ಕಟ್ಟಿಸಿದ್ದ ಅರಮನೆಯ ಮೇಲೆ ರಾಯಲ್ ಏರ್ ಫೋರ್ಸ್ ಯುದ್ಧ ವಿಮಾನಗಳು
Published on
ಬಾಗ್ದಾದ್: ಸದ್ಯಕ್ಕೆ ಇಸ್ಲಾಮಿಕ್ ಸ್ಟೇಟ್ ನ ತರಬೇತಿ ಕೇಂದ್ರವಾಗಿರುವ ಮೃತ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಉತ್ತರ ಇರಾಕ್ ನಲ್ಲಿ ಕಟ್ಟಿಸಿದ್ದ ಅರಮನೆಯ ಮೇಲೆ ರಾಯಲ್ ಏರ್ ಫೋರ್ಸ್ ಯುದ್ಧ ವಿಮಾನಗಳು ದಾಳಿ ನಡೆಸಿವೆ ಎಂದು ಭದ್ರತಾ ಇಲಾಖೆ ಹೇಳಿದೆ. 
ಈ ಪ್ರದೇಶವನ್ನು ಐಸಿಸ್ ನವರು ಆಯ್ಕೆಯಾದ ವಿದೇಶಿ ಭಯೋತ್ಪಾದಕರಿಗೆ ತರಬೇತಿ ನೀಡಲು ಬಳಸುತ್ತಿದ್ದರು ಎಂದು ಖಚಿತವಾದ ನಂತರ ಅಮೆರಿಕಾ ಮೈತ್ರಿ ದೇಶದ ಯುದ್ಧ ವಿಮಾನಗಳು ಮೊಸುಲ್ ನ ಅರಮನೆ ಮೇಲೆ ದಾಳಿ ನಡೆಸಿವೆ ಎಂದು ಆರ್ ಟಿ ಆನ್ಲೈನ್ ವರದಿ ಮಾಡಿದೆ. 
ಮುಖ್ಯ ಅರಮನೆಯನ್ನು ಉಗ್ರಗಾಮಿ ಸಂಘಟನೆ ವಾಸಿಸಲು ಮತ್ತು ಸಭೆ ನಡೆಸಲು ಬಳಸುತ್ತಿದ್ದರೆ, ಹೊರಗಿನ ಕಟ್ಟಡಗಳನ್ನು ತರಬೇತಿ ಮತ್ತಿತರ ಚಟುವಟಿಕೆಗಳಿಗೆ ಬಳಸುತ್ತಿತ್ತು ಎಂದು ತಿಳಿಯಲಾಗಿತ್ತು. 
ಜೂನ್ 2014 ರಿಂದಲೂ ಇರಾಕ್ ನ ಎರಡನೇ ಅತಿ ದೊಡ್ಡ ನಗರ ಮೊಸುಲ್ ನನ್ನು ಐ ಎಸ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಅದೇ ವರ್ಷದ ಸೆಪ್ಟೆಂಬರ್ ನಲ್ಲಿ ಇರಾಕ್ ಮೇಲೆ ವಾಯು ದಾಳಿ ನಡೆಸಲು ಬ್ರಿಟಿಷ್ ಸಂಸತ್ತು ಒಪ್ಪಿಗೆ ನೀಡಿತ್ತು. 
ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ತನಿಖಾಧಿಕಾರಿಗಳು ತನ್ನ ವೈಯಕ್ತಿಕ ಮನೆಗಳಿಗೆ ಭದ್ರತಾ ತಪಾಸಣೆಯನ್ನು ಮಾಡದಂತೆ ಒಪ್ಪಂದ ಮಾಡಿಕೊಂಡ ಮೇಲೆ 1994 ರಲ್ಲಿ ಸದ್ದಾಂ ಈ ಅರಮನೆಯನ್ನು ಕಟ್ಟಿಸಿದ್ದ. ಅಲ್ಲಿ ಮೂರೂ ಸರೋವರಗಳು ಮತ್ತು ಕೃತಕ ಜಲಪಾತಗಳು ಕೂಡ ಇವೆ. 
2006 ರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಸದ್ದಾಮ್ 1991 ರಿಂದ 1999 ರವೆರೆಗೆ ಇರಾಕ್ ನಾದ್ಯಂತ 2 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸುಮಾರು 50 ಅರಮನೆಗಳನ್ನು ಕಟ್ಟಿಸಿದ್ದ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com