
ಇಸ್ಲಾಮಾಬಾದ್: ಭಾರತೀಯ ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಭಾವ ಚಿತ್ರಗಳು ಈಗ ಪಾಕಿಸ್ತಾನದ ವಿಶೇಷ ರೈಲಿನಲ್ಲಿ ರಾರಾಜಿಸುತ್ತಿವೆ. ಈ ಮೂಲಕ ಪಾಕಿಸ್ತಾನದ ನಿಜ ಬಣ್ಣ ಮತ್ತೊಮ್ಮೆ ಬದಲಾಗಿದೆ.
ಪಾಕಿಸ್ತಾನದ ಆಜಾದಿ ಸ್ಪೆಷಲ್ ಎಕ್ಸ್ಪ್ರೆಸ್ ರೈಲಿನ ಹೊರಭಾಗದಲ್ಲಿ ವನಿ ಪೋಸ್ಟರ್ಗಳನ್ನು ಅಂಟಿಸಲಾಗಿದ್ದು, ಇದು ಯಾಕೆ ಎನ್ನುವ ಅನುಮಾನವೂ ಹುಟ್ಟಿಕೊಂಡಿದೆ. ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ದಿನವಾದ ಆಗಸ್ಟ್ 14ರಂದು ಈ ರೈಲು ಕರಾಚಿಯಿಂದ ಪೇಶಾವರಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಹೇಳಲಾಗಿದೆ.
ಉಗ್ರ ಸಂಘಟನೆಯ ಕಮಾಂಡರ್, 22 ವರ್ಷದ ಬುರ್ಹಾನ್ ವನಿಯನ್ನು ಜುಲೈ 8ರಂದು ಮಿಲಿಟರಿ ಎನ್ಕೌಂಟರ್ನಲ್ಲಿ ಬುರ್ಹಾನ್ ವನಿಯನ್ನು ಹತ್ಯೆ ಮಾಡಲಾಗಿತ್ತು.
Advertisement