ಸ್ವಾತಂತ್ರ್ಯೋತ್ಸವ ದಿನದಂದು ವಾಗಾ ಮೇಲೆ ದಾಳಿಗೆ ತಾಲಿಬಾನ್ ಸಂಚು: ಪಾಕ್ ಎಚ್ಚರಿಕೆ

ಪಾಕಿಸ್ತಾನ ಸರ್ಕಾರ ಬುಧವಾರ ಉಗ್ರ ದಾಳಿಯ ಎಚ್ಚರಿಕೆ ನೀಡಿದ್ದು, ಸ್ವಾತಂತ್ರ್ಯೋತ್ಸವ ದಿನದಂದು ಪಾಕಿಸ್ತಾನದ ತಾಲಿಬಾನ್ ಉಗ್ರರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಬುಧವಾರ ಉಗ್ರ ದಾಳಿಯ ಎಚ್ಚರಿಕೆ ನೀಡಿದ್ದು, ಸ್ವಾತಂತ್ರ್ಯೋತ್ಸವ ದಿನದಂದು ಪಾಕಿಸ್ತಾನದ ತಾಲಿಬಾನ್ ಉಗ್ರರು ಭಾರತ-ಪಾಕ್ ನಡುವಿನ ವಾಗಾ ಗಡಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಹೇಳಿದೆ.
ಐಎಎನ್ಎಸ್ ಸುದ್ದಿ ಸಂಸ್ಥೆ ದೊರೆತಿರುವ ಪತ್ರದ ಪ್ರಕಾರ, ಆಗಸ್ಟ್ 13ರಿಂದ 15ರೊಳಗೆ ವಾಗಾ ಗಡಿಯಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ರಾಷ್ಟ್ರೀಯ ಉಗ್ರ ನಿಗ್ರಹ ಪ್ರಾಧಿಕಾರ ಪಂಜಾಬ್ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದೆ.
ತೆಹ್ರೀಕ್ ಇ ತಾಲಿಬಾನ್ ಹಾಗೂ ಫಜಲ್ ಉಲ್ಲಾಹ್ ಉಗ್ರ ಸಂಘಟನೆ ಲಾಹೋರ್ ನ ವಾಗಾ ಗಡಿ ಅಥವಾ ಕಸೂರ್ ನ ಗಂದ ಸಿಂಗ್ ಗಡಿಯಲ್ಲಿ ಆಗಸ್ಟ್ 13, 14 ಅಥವಾ 15ರಂದು ಪರೇಡ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಪಾಕ್ ಎಚ್ಚರಿಸಿದೆ.
ಕನಿಷ್ಠ ಇಬ್ಬರು ಆತ್ಮಾಹುತಿ ದಾಳಿಕೋರರು ಈ ಸ್ಥಳಗಳಿಗೆ ತೆರಳಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com