ಜಾಹೀರಾತಿಗೆ ಹಿಲರಿ ಕ್ಲಿಂಟನ್ ಖರ್ಚು ಮಾಡಿದ್ದು 52 ಮಿಲಿಯನ್ ಡಾಲರ್: ಟ್ರಂಪ್ ಶೂನ್ಯ

ಹಿಲರಿ ಕ್ಲಿಂಟನ್ ಶತಾಯಗತಾಯ ಗೆಲ್ಲಲೆಬೇಕೆಂದು ಪಣತೊಟ್ಟಿದ್ದಾರೆ. ಟಿ.ವಿ ಜಾಹೀರಾತಿಗೆ ಬರೋಬ್ಬರಿ 52 ಮಿಲಿಯನ್ ಡಾಲರ್ ಹಣವನ್ನು ವೆಚ್ಚಮಾಡಲಿದ್ದಾರೆ.
ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್
ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ನವೆಂಬರ್ 5ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ವಿಶ್ವದ ಗಮನಸೆಳೆದಿದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಉಭಯ ಪಕ್ಷದ ಮುಖಂಡರು ಜನತೆಯನ್ನು ಸೆಳೆಯಲು ಹಲವು ತಂತ್ರಗಳಿಗೆ ಮೊರೆ ಹೋಗಿದ್ದಾರೆ.

ಪ್ರಥಮ ಮಹಿಳಾ ಅಭ್ಯರ್ಥಿ ಎಂಬ ಗೌರವಕ್ಕೆ ಪಾತ್ರರಾಗಿರುವ ಹಿಲರಿ ಕ್ಲಿಂಟನ್ ಶತಾಯಗತಾಯ ಗೆಲ್ಲಲೆಬೇಕೆಂದು ಪಣತೊಟ್ಟಿದ್ದಾರೆ. ಆದ್ದರಿಂದ ಟಿ.ವಿ ಜಾಹೀರಾತಿಗೆ ಬರೋಬ್ಬರಿ 52 ಮಿಲಿಯನ್ ಡಾಲರ್ ಹಣವನ್ನು ವೆಚ್ಚಮಾಡಲಿದ್ದಾರೆ. ಪ್ರತಿಸ್ಪರ್ಧಿ ಟ್ರಂಪ್ ಮಾತ್ರ ಇದಕ್ಕೆ ವಿರುದ್ಧ ನೀತಿ ಅನುಸರಿಸಿ, ಜಾಹೀರಾತಿಗೆ ಒಂದು ಡಾಲರ್ ಕೂಡ ವೆಚ್ಚ ಮಾಡುತ್ತಿಲ್ಲ.

ವಿವಾದಪ್ರಿಯ ಎಂದೇ ಗುರುತಿಸಿಕೊಂಡಿರುವ ಉದ್ಯಮಿ ಟ್ರಂಪ್​ಗೆ ಜಾಹೀರಾತಿನ ಅಗತ್ಯತೆ ಇಲ್ಲವಂತೆ. ಇದಕ್ಕೆ ಕಾರಣ ಟ್ರಂಪ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹಿಂದೆ ಬಿದ್ದಿರುವುದು. ಆದ್ದರಿಂದ ಹಿಲರಿಗೆ ಉದ್ಯಮಿಗಳು ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಎಂಭತ್ತು ಮಿಲಿಯನ್ ಡಾಲರ್ ದೇಣಿಗೆ ಹಿಲರಿ ಅವರ ಅಕೌಂಟ್​ಗೆ ಜಮಾ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com