ಆಸ್ಟ್ರೇಲಿಯಾ ಬೀಚ್ ಬಳಿ ಕಂಡ ಜನಾಂಗೀಯ ನಿಂದನೆ ಗೋಡೆ ಬರಹ, ಸ್ವಸ್ತಿಕ ಚಿಹ್ನೆಗಳು

ಆಸ್ಟ್ರೇಲಿಯಾದ ಜನಪ್ರಿಯ ತಾಣವಾದ ನ್ಯೂ ಸೌತ್ ವೇಲ್ಸ್ ನ ಬೊಂಡಿ ಬೀಚ್ ನ ಮುಖ್ಯ ರಸ್ತೆಯ ಬಳಿ ಜನಾಂಗೀಯ ನಿಂದನಾ ಗೋಡೆ ಬರಹಗಳು ಮತ್ತು ಸ್ವಸ್ತಿಕ ಚಿಹ್ನೆಗಳು ಎದ್ದಿರುವುದು ಕಂಡುಬಂದಿದೆ
ಆಸ್ಟ್ರೇಲಿಯಾ ಬೀಚ್ ಬಳಿ ಕಂಡ ಜನಾಂಗೀಯ ನಿಂದನೆ ಗೋಡೆ ಬರಹ, ಸ್ವಸ್ತಿಕ ಚಿಹ್ನೆಗಳು
ಆಸ್ಟ್ರೇಲಿಯಾ ಬೀಚ್ ಬಳಿ ಕಂಡ ಜನಾಂಗೀಯ ನಿಂದನೆ ಗೋಡೆ ಬರಹ, ಸ್ವಸ್ತಿಕ ಚಿಹ್ನೆಗಳು

ಸಿಡ್ನಿ: ಆಸ್ಟ್ರೇಲಿಯಾದ ಜನಪ್ರಿಯ ತಾಣವಾದ ನ್ಯೂ ಸೌತ್ ವೇಲ್ಸ್ ನ ಬೊಂಡಿ ಬೀಚ್ ನ ಮುಖ್ಯ ರಸ್ತೆಯ ಬಳಿ ಜನಾಂಗೀಯ ನಿಂದನಾ ಗೋಡೆ ಬರಹಗಳು ಮತ್ತು ಸ್ವಸ್ತಿಕ ಚಿಹ್ನೆಗಳು ಎದ್ದಿರುವುದು ಕಂಡುಬಂದಿದೆ ಎಂದು ಗುರುವಾರ ವರದಿಯಾಗಿದೆ.

ರಸ್ತೆ ಬದಿ, ಬಸ್ ನಿಲ್ದಾಣ, ಕಂಬಗಳು, ಕೂರುವ ಬೆಂಚುಗಳು ಮತ್ತು ವಿದ್ಯುಚ್ಛಕ್ತಿ ಬಾಕ್ಸ್ ಗಳ ಮೇಲೆ 15 ಕ್ಕೂ ಹೆಚ್ಚು ಸ್ವಸ್ತಿಕ ಚಿಹ್ನೆಗಳನ್ನು ಬರೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಎಬಿಸಿ ವರದಿ ಮಾಡಿದ್ದೆ.

ಮತ್ತೊಂದು ಗೋಡೆ ಬರಹದ ಮೇಲೆ "ಬಿಳಿಯಲ್ಲ, ಸರಿಯಲ್ಲ" ಎಂದು ಕೂಡ ಬರೆಯಲಾಗಿದೆ.

ಈ ಗೋಡೆ ಬರಹಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಜೇಸನ್ ಬಾಕ್ಸ್ ಹೇಳಿದ್ದಾರೆ.

"ದ್ವೇಷಪೂರಿತ ಮತ್ತು ಪೂರ್ವಾಗ್ರಹಪೀಡಿತ ಅಪರಾಧಗಳನ್ನು ನ್ಯೂ ಸೌತ್ ವೇಲ್ಸ್ ಪೊಲೀಸ್ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಇದನ್ನು ಸಹಿಸಿಕೊಳ್ಳುವುದಿಲ್ಲ" ಎಂದು ಗುರುವಾರ ಬಾಕ್ಸ್ ಹೇಳಿರುವುದಾಗಿ ಎಬಿಸಿ ವರದಿ ಮಾಡಿದೆ.

ನ್ಯೂ ಸೌತ್ ವೇಲ್ಸ್ ನ ಜ್ಯುಯಿಷ್ ಬೋರ್ಡ್ ಆಫ್ ಡೆಪ್ಯುಟಿಸ್ ನ ಅಧ್ಯಕ್ಷೀಯ ಅಧಿಕಾರಿ ವೀಕ್ ಅಲ್ಹಡೆಫ್ ಈ ಗೋಡೆ ಬರಹ ಗಂಭೀರವಾದ ದ್ವೇಷದ ಅಪರಾಧ ಎಂದು ಖಂಡಿಸಿದ್ದಾರೆ.

"ಸ್ವಸ್ತಿಕ ನಾಝಿ ಜರ್ಮನಿಯ ಚಿಹ್ನೆಯಾಗಿರುವುದರಿಂದ ಇದರಿಂದ ನೋವಾಗಿದೆ (ಜ್ಯು ಸಮುದಾಯಕ್ಕೆ) ಮತ್ತು ಇದು ಆಸ್ಟ್ರೇಲಿಯಾ ನಾಗರಿಕರಿಗೂ ಮಾಡಿದ ಅವಮಾನ ಏಕೆಂದರೆ ಆಸ್ಟ್ರೇಲಿಯಾ ನಾಝಿ ಜರ್ಮನಿ ವಿರುದ್ಧ ಹೋರಾಡಿತ್ತು" ಎಂದು ಅಲ್ಹಡೆಫ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com