ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಂ ಕ್ಷಿಪಣಿ ನಿಯೋಜನೆ: ಚೀನಾ ಕೆಂಡಾಮಂಡಲ

ದಕ್ಷಿಣ ಚೀನಾ ಸಮುದ್ರದ ವಿವಾದದಲ್ಲಿ ವಿಶ್ವಸಂಸ್ಥೆ ನ್ಯಾಯಮಂಡಳಿಯ ತೀರ್ಪು ಚೀನಾ ವಿರುದ್ಧವಾಗಿ ಬಂದ ನಂತರ ವಿಯೆಟ್ನಾಯಂ ಕ್ಷಿಪಣಿಗಳನ್ನು ವಿವಾದಿತ ದಕ್ಷಿಣ ಚೀನಾ ಸಮುದ್ರದ ಪ್ರದೇಶದಲ್ಲಿ...
ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಂ ಕ್ಷಿಪಣಿ ನಿಯೋಜನೆ: ಚೀನಾ ಕೆಂಡಾಮಂಡಲ

ಬೀಜಿಂಗ್: ದಕ್ಷಿಣ ಚೀನಾ ಸಮುದ್ರದ ವಿವಾದದಲ್ಲಿ ವಿಶ್ವಸಂಸ್ಥೆ ನ್ಯಾಯಮಂಡಳಿಯ ತೀರ್ಪು ಚೀನಾ ವಿರುದ್ಧವಾಗಿ ಬಂದ ನಂತರ ವಿಯೆಟ್ನಾಂ ಕ್ಷಿಪಣಿಗಳನ್ನು ವಿವಾದಿತ ದಕ್ಷಿಣ ಚೀನಾ ಸಮುದ್ರದ ಪ್ರದೇಶದಲ್ಲಿ ನಿಯೋಜಿಸಿದೆ.

ವಿಯೆಟ್ನಾಂ ನಿಯೋಜಿಸಿರುವ ಕ್ಷಿಪಣಿಗಳು ದಕ್ಷಿಣ ಚೀನಾ ಸಮುದ್ರದಲ್ಲಿರುವ ಚೀನಾದ ರನ್ ವೇ ಹಾಗೂ ಮಿಲಿಟರಿ ಯಂತ್ರೋಪಕರಣಗಳನ್ನು ನಾಶಮಾಡುವ ಸಾಮರ್ಥ್ಯವಿದೆ. ದಕ್ಷಿಣ ಚೀನಾ ಸಮುದ್ರದ ಪ್ರದೇಶದಲ್ಲಿರುವ ದ್ವೀಪಗಳ ಐದು ಮಿಲಿಟರಿ ಕಾರ್ಯಕೇಂದ್ರಗಳಲ್ಲಿ ವಿಯೆಟ್ನಾಂ ಕ್ಷಿಪಣಿಗಳನ್ನು ನಿಯೋಜನೆ ಮಾಡಿದ್ದು ಚೀನಾವನ್ನು ಕೆರಳಿಸುವ ನಡೆಯಾಗಿದೆ ಎಂದು ರಾಜತಾಂತ್ರಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಈ ಕುರಿತ ವರದಿಯನ್ನು ನಿರಾಕರಿಸಿರುವ ವಿಯೆಟ್ನಾಂ ನ ವಿದೇಶಾಂಗ ಸಚಿವಾಲಯ, ದಕ್ಷಿಣ ಚೀನಾ ಸಮುದ್ರದ ಪ್ರದೇಶದಲ್ಲಿ ವಿಯೆಟ್ನಾಂ ಕ್ಷಿಪಣಿಗಳನ್ನು ನಿಯೋಜಿಸಿರುವ ಬಗ್ಗೆ ಪ್ರಕಟವಾದ ವರದಿ ಹಾಗೂ ವಿಶ್ಲೇಷಣೆಗಳು ಅಸಮರ್ಪಕವಾಗಿದೆ ಎಂದು ಹೇಳಿದೆ. ವಿಶ್ಲೇಷಕರ ನಿರೀಕ್ಷೆಯಂತೆ ವಿಯೆಟ್ನಾಂ ನ ಕ್ರಮ ಚೀನಾವನ್ನು ಕೆರಳಿಸಿದ್ದು, ಒಂದು ವೇಳೆ ವಿಯೆಟ್ನಾಯಂ ಕ್ಷಿಪಣಿಗಳನ್ನು ನಿಯೋಜಿಸಿದ್ದರೆ, ಆ ಮೂಲಕ ವಿಯೆಟ್ನಾಂ ದೊಡ್ಡ ತಪ್ಪು ಮಾಡಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಕಿಡಿಕಾರಿದೆ. ವಿಯೆಟ್ನಾಂ ನಿಯೋಜಿಸಿರುವ ರಾಕೆಟ್ ಗಳು ಚೀನಾವನ್ನು ಗುರಿಯಾಗಿಸಿಕೊಂಡಿದ್ದರೆ ಅದು ವಿಯೆಟ್ನಾಂ ಮಾಡುತ್ತಿರುವ ಘೋರ ಅಪರಾಧ, ವಿಯೆಟ್ನಾಂ ಇತಿಹಾಸವನ್ನು ನೆನಪಿಸಿಕೊಂಡು ಕೆಲವೊಂದು ಪಾಠವನ್ನು ಕಲಿತರೆ ಒಳಿತು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ಎಚ್ಚರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com