ಪತಿಗೆ ವಿಚ್ಛೇದನ ನೀಡಿದ ಶುಲ್ಕ ಪಾವತಿಗೆ ಮದುವೆಯ ಉಡುಗೆಯನ್ನೇ ಮಾರಾಟಕ್ಕಿಟ್ಟ ಮಹಿಳೆ!

ವಿಲಕ್ಷಣವಾದ ಘಟನೆಯೊಂದರಲ್ಲಿ ಪತಿಗೆ ವಿಚ್ಛೇದನ ನೀಡಿರುವ ಬ್ರಿಟನ್ ಮಹಿಳೆಯೊಬ್ಬರು ವಿಚ್ಛೇದನದ ಶುಲ್ಕ ಪಾವತಿ ಮಾಡಲು ಮದುವೆಯ ಉಡುಗೆಯನ್ನೇ ಮಾರಾಟ್ಟಕ್ಕೆ ಇಟ್ಟಿದ್ದಾರೆ.
ಪತಿಗೆ ವಿಚ್ಛೇದನ ನೀಡಿದ ಶುಲ್ಕ ಪಾವತಿಗೆ ಮದುವೆಯ ಉಡುಗೆಯನ್ನೇ ಮಾರಾಟಕ್ಕಿಟ್ಟ ಮಹಿಳೆ!
ಪತಿಗೆ ವಿಚ್ಛೇದನ ನೀಡಿದ ಶುಲ್ಕ ಪಾವತಿಗೆ ಮದುವೆಯ ಉಡುಗೆಯನ್ನೇ ಮಾರಾಟಕ್ಕಿಟ್ಟ ಮಹಿಳೆ!

ಲಂಡನ್: ವಿಲಕ್ಷಣವಾದ ಘಟನೆಯೊಂದರಲ್ಲಿ ಪತಿಗೆ ವಿಚ್ಛೇದನ ನೀಡಿರುವ ಬ್ರಿಟನ್ ಮಹಿಳೆಯೊಬ್ಬರು ವಿಚ್ಛೇದನದ ಶುಲ್ಕ ಪಾವತಿ ಮಾಡಲು ಮದುವೆಯ ಉಡುಗೆಯನ್ನೇ ಮಾರಾಟ್ಟಕ್ಕೆ ಇಟ್ಟಿದ್ದಾರೆ.

ಸುಮಾರು 2,000 ಬ್ರಿಟಿಷ್ ಪೌಂಡ್ಸ್  ಮೌಲ್ಯದ ಉಡುಗೆಯನ್ನು ಇ-ಬೇನಲ್ಲಿ ಮಾರಾಟಕ್ಕಿಡಲಾಗಿದ್ದು, 500 ಬ್ರಿಟಿಷ್ ಪೌಂಡ್ಸ್ ನಿಂದ ಬಿಡ್ಡಿಂಗ್ ಪ್ರಾರಂಭಿಸಲಾಗಿದೆ. ತನ್ನ ಪತಿ ವಿವಾಹವಾದ 18 ತಿಂಗಳಲ್ಲೇ ತನ್ನನ್ನು ತೊರೆದಿದ್ದು ಬೇರೊಬ್ಬ ಮಹಿಳೆಯೊಂದಿಗೆ ವಾಸಿಸುವ ಮೂಲಕ ತನಗೆ ಮೋಸ ಮಾಡಿದ್ದಾರೆ ಎಂದು ಸಮಂತಾ ವ್ರಾಗ್ ಆರೋಪಿಸಿದ್ದಾರೆ.

ಸಮಂತಾ ಇ-ಬೇ ನಲ್ಲಿ ಮಾರಾಟಕ್ಕಿರುವ ಉಡುಗೆ ಬಗ್ಗೆ 12 ಜನರು ವಿಚಾರಿಸಿದ್ದಾರೆ ಆದರೆ ಈ ವರೆಗೂ ಯಾರೂ ಬಿಡ್ ಮಾಡಿಲ್ಲ. 2014 ರಲ್ಲಿ ಹೊಚ್ಚಹೊಸದಾಗಿದ್ದ ಉಡುಗೆಯನ್ನು 2000 ಬ್ರಿಟಿಷ್ ಪೌಂಡ್ಸ್ ವೆಚ್ಚವಾಗಿದೆ. ಈ ಉಡುಗೆ ನಿಮಗೆ ನನಗಿಂತಲೂ ಸಂತೋಷವನ್ನು ತರಬಲ್ಲದು ಎಂದು ಸಮಂತಾ ಇ-ಬೇ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಉಡುಗೆ ಬಗ್ಗೆ ಹಾಗು ನನ್ನ ಪತಿಯ ಮೋಸದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನನಗೆ ಕರೆ ಮಾಡಿ ಎಂದು ಸುಮಂತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com