ಟರ್ಕಿಯಲ್ಲಿ ಬಾಂಬ್ ದಾಳಿ: 14 ಸಾವು, 220 ಮಂದಿಗೆ ಗಾಯ

ಟರ್ಕಿಯಲ್ಲಿ ಭದ್ರತಾ ಪಡೆ ಯೋಧರನ್ನು ಗುರಿಯಾಗಿಟ್ಟುಕೊಂಡು ನಿನ್ನೆ ಸಾಯಂಕಾಲ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಠ 14 ಮಂದಿ...
ಟರ್ಕಿಯ ಪೂರ್ವ ಪ್ರಾಂತ್ಯದ ಎಲಜಿಗ್ ನಲ್ಲಿ  ಬಾಂಬ್ ದಾಳಿ ನಡೆದ ನಂತರ ಚಲ್ಲಾಪಿಲ್ಲಿಯಾದ ಜನ ಮತ್ತು ಹಾನಿಗೀಡಾದ ಕಟ್ಟಡಗಳು
ಟರ್ಕಿಯ ಪೂರ್ವ ಪ್ರಾಂತ್ಯದ ಎಲಜಿಗ್ ನಲ್ಲಿ ಬಾಂಬ್ ದಾಳಿ ನಡೆದ ನಂತರ ಚಲ್ಲಾಪಿಲ್ಲಿಯಾದ ಜನ ಮತ್ತು ಹಾನಿಗೀಡಾದ ಕಟ್ಟಡಗಳು
ಅಂಕಾರಾ(ಟರ್ಕಿ): ಟರ್ಕಿಯಲ್ಲಿ ಭದ್ರತಾ ಪಡೆ ಯೋಧರನ್ನು ಗುರಿಯಾಗಿಟ್ಟುಕೊಂಡು ನಿನ್ನೆ ಸಾಯಂಕಾಲ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಠ 14 ಮಂದಿ ಮೃತಪಟ್ಟು 220ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟರ್ಕಿಯ ಪೂರ್ವ ಪ್ರಾಂತ್ಯದಲ್ಲಿ ಎರಡು ಕಾರ್ ಬಾಂಬ್ ಪೊಲೀಸ್ ಠಾಣೆಗೆ ದಾಳಿ ನಡೆಸಿದ್ದು, ಇನ್ನೊಂದು ರಸ್ತೆ ಬದಿ ಸಂಭವಿಸಿದ ಸ್ಫೋಟ ದೇಶದ ಆಗ್ನೇಯ ದಿಕ್ಕಿನಲ್ಲಿ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಾಹನವನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾಗಿತ್ತು.
ಕರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಅಥವಾ ಪಿಕೆಕೆ ಈ ಸ್ಫೋಟ ನಡೆಸಿದ್ದು, ಪೊಲೀಸ್ ಠಾಣೆ ಮೇಲೆ ಮತ್ತು ರಸ್ತೆ ಬದಿಯಲ್ಲಿ ಹೋಗುವ ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಉದ್ದೇಶ ಹೊಂದಿತ್ತು. ಟರ್ಕಿಶ್ ನಗರಗಳಲ್ಲಿ ಪೊಲೀಸರ ಮೇಲೆ ದಾಳಿ ಹೆಚ್ಚಿಸುವ ಬೆದರಿಕೆಯನ್ನು ಕಳೆದ ವಾರ ಪಿಕೆಕೆ ಕಮಾಂಡರ್ ಸೆಮಿಲ್ ಬೆಯ್ಕ್ ಒಡ್ಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಮೂಲದ ಮುಸ್ಲಿಂ ಪಾದ್ರಿ ಫೆತುಲ್ಹಾ ಗುಲೆನ್ ಅನುಯಾಯಿಗಳು ಚಳುವಳಿ ಆರಂಭಿಸಿದ್ದು, ಈತನನ್ನು ಹತ್ತಿಕ್ಕಲು ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಮುಸ್ಲಿಂ ಪಾದ್ರಿಯ ನೇತೃತ್ವದಲ್ಲಿ ಕಳೆದ ತಿಂಗಳು ವಿಫಲ ಸೇನಾದಂಗೆ ನಡೆದು ಕನಿಷ್ಠ 270 ಮಂದಿ ಮೃತಪಟ್ಟಿದ್ದರು.
ಮೊದಲ ಕಾರ್ ಬಾಂಬ್ ಪೂರ್ವ ಪ್ರಾಂತ್ಯದಲ್ಲಿ ವಾನ್ ಲೇಟ್ ನಲ್ಲಿ ಪೊಲೀಸ್ ಠಾಣೆ ಮೇಲೆ ನಡೆಯಿತು. ಇದರಲ್ಲಿ ಪೊಲೀಸ್ ಅಧಿಕಾರಿ ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಇನ್ನು 53 ನಾಗರಿಕರು ಮತ್ತು 20 ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಕಾರ್ ಬಾಂಬ್ ಪೂರ್ವ ಟರ್ಕಿ ನಗರ ಎಲಜಿಗ್ ನಲ್ಲಿ ಪೊಲೀಸ್ ಕೇಂದ್ರ ಠಾಣೆ ಮೇಲೆ ನಡೆದು 5 ಮಂದಿ ಮೃತಪಟ್ಟಿದ್ದಾರೆ ಎಂದು ಅಧ್ಯಕ್ಷ ತಯ್ಯಿಪ್ ಎರ್ಡೊಗಾನ್ ತಿಳಿಸಿದ್ದಾರೆ. 146 ಮಂದಿ ಗಾಯಗೊಂಡಿದ್ದು, ಅವರಲ್ಲಿ 14 ಮಂದಿಯ ಸ್ಥಿತಿ ಗಂಭೀರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com