ಪ್ಯಾರಿಸ್: ತಾನು ಆರ್ಥಿಕ ಯುದ್ಧದ ಬಲಿಪಶುವಾಗಿರಹುದು ಎಂದು ಭಾರತದ ಜಲಾಂತರ್ಗಾಮಿ ನೌಕೆಗೆ ಸಂಬಂಧಪಟ್ಟ ದಾಖಲೆಗಳು ಸೋರಿಕೆಯಾಗಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಬಂದಿರುವ ವರದಿಗೆ ಸಂಬಂಧಪಟ್ಟಂತೆ ಫ್ರಾನ್ಸ್ ನ ನೌಕಾ ಗುತ್ತಿಗೆ ಕಂಪೆನಿ ಡಿಸಿಎನ್ಎಸ್ ಪ್ರತಿಕ್ರಿಯೆ ನೀಡಿದೆ.
ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಯ ಯುದ್ಧ ಸಾಮರ್ಥ್ಯ, ಆಸ್ಟ್ರೇಲಿಯಾ ಜೊತೆಗೆ ಇನ್ನೊಂದು ದೊಡ್ಡ ಗುತ್ತಿಗೆಗೆ ಸಂಬಂಧಪಟ್ಟಂತೆ ಕಳವಳಕಾರಿ ಅಂಶಗಳನ್ನೊಳಗೊಂಡ ವರದಿ ದಿ ಆಸ್ಟ್ರೇಲಿಯನ್ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದ್ದು ಭಾರತ ಈ ಸಂಬಂಧ ತನಿಖೆ ಆರಂಭಿಸಿದೆ.
ಶೇಕಡಾ 35ರಷ್ಟು ತೇಲ್ಸ್ ಒಡೆತನದ ಡಿಸಿಎನ್ಎಸ್, ಇದರಿಂದ ಗ್ರಾಹಕರಿಗೆ ಏನಾದರೂ ತೊಂದರೆಯುಂಟಾಗಬಹುದೇ ಎಂದು ತಿಳಿದುಕೊಳ್ಳಲಾಗುವುದು ಎಂದರು.
ಸೋರಿಕೆ ಗುತ್ತಿಗೆ ಮೇಲೆ ಪರಿಣಾಮ ಬೀರಬಹುದೇ ಎಂದು ಕೇಳಿದ್ದಕ್ಕೆ, ಕಂಪೆನಿ ವಕ್ತಾರೆ, ಸೋರಿಕೆ ಹಿಂದೆ ಕಾರ್ಪೊರೇಟ್ ಬೇಹುಗಾರಿಕೆಯ ಕೈವಾಡವಿರಬಹುದೆಂದು ಶಂಕಿಸಿದ್ದಾರೆ.
'' ಸ್ಪರ್ಧೆ ಕಠಿಣವಾಗುತ್ತಾ ಹೋಗುತ್ತದೆ. ಎಲ್ಲಾ ಸನ್ನಿವೇಶನಗಳನ್ನು ಈ ಸಂದರ್ಭದಲ್ಲಿ ಎದುರಿಸಬೇಕಾಗುತ್ತದೆ. ಭಾರತ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳು ಡಿಸಿಎನ್ಎಸ್ ವಿರುದ್ಧ ಕಾನೂನುಬದ್ಧ ಪ್ರಶ್ನೆಗಳನ್ನು ಎತ್ತಬಹುದು. ಆರ್ಥಿಕ ಯುದ್ಧದಲ್ಲಿ ಉಪಕರಣದ ಒಂದು ಭಾಗವಾಗುತ್ತದೆ'' ಎಂದರು.
ಆಸ್ಟ್ರೇಲಿಯಾ ಜೊತೆಗೆ ಕೂಡ ಒಪ್ಪಂದ ಮಾಡಿಕೊಂಡಿದ್ದ ಫ್ರಾನ್ಸ್ ರಕ್ಷಣಾ ಸಚಿವ ಜೀನ್-ಯುವೆಸ್ ಲಿ ಡ್ರಿಯಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.