ಬ್ರಸಲ್ಸ್ ಅಪರಾಧ ಪ್ರಯೋಗಾಲಯದಲ್ಲಿ ಸ್ಫೋಟ

ಬೆಲ್ಜಿಯಂನ ಬ್ರಸಲ್ಸ್ ಹೊರವಲಯದಲ್ಲಿರುವ ಅಪರಾಧ ಪ್ರಯೋಗಾಲಯದಲ್ಲಿ ಮಂಗಳವಾರ ಸ್ಫೋಟವೊಂದು ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬ್ರಸಲ್ಸ್: ಬೆಲ್ಜಿಯಂನ ಬ್ರಸಲ್ಸ್ ಹೊರವಲಯದಲ್ಲಿರುವ ಅಪರಾಧ ಪ್ರಯೋಗಾಲಯದಲ್ಲಿ ಮಂಗಳವಾರ ಸ್ಫೋಟವೊಂದು ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಆರ್ ಟಿ ಎಲ್ ಬೆಲ್ಜಿಯಂ ನ್ಯೂಸ್ ಪ್ರಕಾರ, ಬ್ರಸಲ್ಸ್ ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಆವರಣದೊಳಕ್ಕೆ ನುಗ್ಗಿ ಬಂದ ಕಾರು ಮಧ್ಯರಾತ್ರಿ ಸುಮಾರು 2:30 ಕ್ಕೆ ಸ್ಫೋಟಗೊಂಡಿದೆ ಎಂದು ತಿಳಿಸಿದೆ. 
ಇದರಿಂದ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲಾಗಿದೆ. ಇಲ್ಲಿಯವರೆಗೂ ಯಾವುದೇ ಸಾವಿನ ವರದಿಯಾಗಿಲ್ಲ ಎಂದು ಬ್ರಸಲ್ಸ್ ಅಗ್ನಿಶಾಮಕ ದಳದ ವಕ್ತಾರ ಪಿಯರೆ ಮೆಯ್ಸ್ ಹೇಳಿದ್ದಾರೆ. 
ಈ ದಾಳಿಯ ಕಾರಣ ತಿಳಿದುಬಂದಿಲ್ಲ. ಈ ಪ್ರದೇಶವನ್ನು ಪೊಲೀಸರು ಸುತ್ತುವರಿದು ತನಿಖೆ ನಡೆಸಿದ್ದಾರೆ. 
ಈ ಅಪರಾಧ ಯೋಗಾಲಯ, ಕಾನೂನು ತಜ್ಞರಿಗೆ ತನಿಖೆಯಲ್ಲಿ ಸಹಕಾರ ನೀಡುತ್ತದೆ. ನವೆಂಬರ್ ನಲ್ಲಿ ನಡೆದ ಪ್ಯಾರಿಸ್ ದಾಳಿಯಲ್ಲಿ ತನ್ನನ್ನೇ ಸ್ಫೋಟಿಸಿಕೊಂಡಿದ್ದ ಬಿಲಾಲ್ ಹಾಡ್ಫಿ ಇದೆ ಭಾಗದಲ್ಲಿ ವಾಸಿಸುತ್ತಿದ್ದವನು ಎಂದು ತಿಳಿದುಬಂದ್ದಿದೆ. 
ಮಾರ್ಚ್ ನಲ್ಲಿ ಬ್ರಸಲ್ಸ್ ವಿಮಾನ ನಿಲ್ದಾಣ ಮತ್ತು ಮೆಟ್ರೋ ಮೇಲೆ ಇಸ್ಲಾಮಿಕ್ ಸ್ಟೇಟ್ ನಡೆಸಿದ ದಾಳಿಯಲ್ಲಿ 32 ಜನ ಮೃತಪಟ್ಟಿದ್ದರು. ಆಗಿನಿಂದ ಬೆಲ್ಜಿಯಂ ನಲ್ಲಿ ಭಯೋತ್ಪಾದನೆ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com