ಪ್ರಧಾನಿ ಮೋದಿ ಹೇಳಿಕೆ ನಂತರ ಬಲೂಚಿಸ್ಥಾನದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿರುವ ಪಾಕಿಸ್ಥಾನ!

ಬಲೂಚಿಸ್ಥಾನದಲ್ಲಿ ಪಾಕಿಸ್ಥಾನ ಸೇನೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದೆಯಾದರೂ, ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನಂತರ ಮತ್ತಷ್ಟು ಅಮಾನವೀಯ ದೌರ್ಜನ್ಯ ನಡೆಯಲು ಪ್ರಾರಂಭವಾಗಿದೆ.
ಪಾಕಿಸ್ಥಾನ ಸೇನೆ (ಸಂಗ್ರಹ ಚಿತ್ರ)
ಪಾಕಿಸ್ಥಾನ ಸೇನೆ (ಸಂಗ್ರಹ ಚಿತ್ರ)

ನವದೆಹಲಿ: ಬಲೂಚಿಸ್ಥಾನದಲ್ಲಿ ಪಾಕಿಸ್ಥಾನ ಸೇನೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದೆಯಾದರೂ, ಪ್ರಧಾನಿ ನರೇಂದ್ರ ಮೋದಿ ಅವರು ಬಲೂಚಿಸ್ಥಾನದ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ ನಂತರ ಮತ್ತಷ್ಟು ಅಮಾನವೀಯ ದೌರ್ಜನ್ಯ ನಡೆಯಲು ಪ್ರಾರಂಭವಾಗಿರುವ ಬಗ್ಗೆ ವರದಿ ಪ್ರಕಟವಾಗಿದೆ.

ಕಾರ್ಯಕರ್ತರ ದೂರಿನ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ಥಾನದ ಬಗ್ಗೆ ಮಾತನಾಡಿದ ಬಳಿಕ ಪಾಕಿಸ್ಥಾನ ಸೇನೆ ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲು ಪ್ರಾರಂಭಿಸಿದೆ ಎಂದು ಆರೋಪಿಸಿದ್ದಾರೆ.

ಪಾಕಿಸ್ಥಾನ ಸೇನೆ ಆಗಸ್ಟ್ 15 ರಂದು ಪಾಕಿಸ್ಥಾನ 100 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದು, 150 ಜನರನ್ನು ಅಪಹರಣ ಮಾಡಲಾಗಿದೆ ಎಂದು ಬಲೂಚ್ ರಾಷ್ಟ್ರೀಯವಾದಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಾಕಿಸ್ಥಾನ ಸೇನೆ ಬಲೂಚಿಸ್ಥಾನದವರನ್ನು ಮೃಗಗಳಿಗಿಂತಲೂ ಕೀಳಾಗಿ ನಡೆಸಿಕೊಳ್ಳುತ್ತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲೂಚಿಸ್ಥಾನದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಜರ್ಮನಿಯಲ್ಲಿ ಬಲೂಚ್ ರಾಷ್ಟ್ರೀಯವಾದಿಗಳು ಪ್ರತಿಭಟನೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com