ಪಾಕಿಸ್ತಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರದಿಂದ ಭಾರತದ ಚಾನಲ್ ಗಳನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧ

ಭಾರತದ ವಾಹಿನಿಗಳಿಂದ ಅಕ್ರಮವಾಗಿ ವಿಷಯಗಳನ್ನು ಪ್ರಕಟಿಸುವ ಪಾಕಿಸ್ತಾನದ ವಾಹಿನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಎಚ್ಚರಿಕೆ
ಪಾಕಿಸ್ತಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರದಿಂದ ಭಾರತದ ಚಾನಲ್ ಗಳನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧ
ಪಾಕಿಸ್ತಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರದಿಂದ ಭಾರತದ ಚಾನಲ್ ಗಳನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧ

ಇಸ್ಲಾಮಾಬಾದ್: ಭಾರತದ ವಾಹಿನಿಗಳಿಂದ ಅಕ್ರಮವಾಗಿ ವಿಷಯಗಳನ್ನು ಪ್ರಕಟಿಸುವ ಪಾಕಿಸ್ತಾನದ ವಾಹಿನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಸಾರ್ವಜನಿಕರ, ಕೆಲವು ಟಿವಿ ಮಾಲೀಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಈ ಎಚ್ಚರಿಕೆ ನೀಡಿದ್ದು, ಪ್ರಸಾರವಾಗುವ ಇಡೀ ಕಾರ್ಯಕ್ರಮ ಪ್ರಸಾರವಾಗುವ  ಶೇ.6 ಕ್ಕಿಂತ ಕಡಿಮೆ ಅವಧಿಯಲ್ಲಿ ಭಾರತದ ದೂರದರ್ಶನ ವಾಹಿನಿಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿದೆ.

ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ಅಬ್ಸಆರ್ ಆಲಂ, ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಚಾನಲ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿದೇಶಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅನುಮತಿ, ಪರವಾನಗಿ ಪಡೆದಿರುವ ಚಾನಲ್ ಗಳು ಮಾತ್ರ ಭಾರತದ ವಾಹಿನಿಗಳನ್ನು ಪ್ರಸಾರ ಮಾಡಬಹುದಾಗಿದೆ. ಉಳಿದ ಪಾಕಿಸ್ತಾನದ ಚಾನಲ್ ಗಳು ಅಕ್ಟೊಬರ್ 15 ರಿಂದ ಒಟ್ಟಾರೆ ಪ್ರಸಾರ ವೇಳೆಯ ಶೇ.6 ಕ್ಕಿಂತ ಕಡಿಮೆ ಅವಧಿಯಲ್ಲಿ ಭಾರತದ ಚಾನಲ್ ಗಳ ಅಂಶವನ್ನು ಪ್ರಸಾರ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com