ದುರ್ಗಾಪೂಜಾ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಉಂಟಾದಾಗಿನಿಂದಲೂ ಜ್ಯುವೆಲ್ ಎಂಬಾತ ಸ್ಥಳೀಯ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದ ಎಂಬ ಆರೋಪವಿದೆ. ಬೆಂಕಿ ಅವಗಢದಲ್ಲಿ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಅಕ್ಟೋಬರ್ ತಿಂಗಳಲ್ಲೂ ಸಹ ಬಾಂಗ್ಲಾದೇಶದಲ್ಲಿ ಇಂಥಹದ್ದೇ ಘಟನೆ ನಡೆದಿದ್ದ ಬಗ್ಗೆ ವರದಿಗಳು ಪ್ರಕಟವಾಗಿದ್ದವು, ಎರಡು ತಿಂಗಳ ಹಿಂದೆ 15 ಹಿಂದೂ ದೇವಾಲಯಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದಲ್ಲದೇ 100 ಕ್ಕೂ ಹೆಚ್ಚು ಹಿಂದೂಗಳ ಮನೆಗಳಲ್ಲಿ ಲೂಟಿಯನ್ನೂ ಮಾಡಲಾಗಿತ್ತು.