ಫಿಲಿಪೈನ್ಸ್ ಅಧ್ಯಕ್ಷ ಡ್ಯುಟರ್ಟೆ ಭೇಟಿಗೆ ಟ್ರಂಪ್ ಆಹ್ವಾನ, ಡ್ರಗ್ ವಿರೋಧಿ ಅಭಿಯಾನಕ್ಕೆ ಬೆಂಬಲ

ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆಗೆ ಅಮೆರಿಕಾಗೆ ಭೇಟಿ ನೀಡುವಂತೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನ ನೀಡಿದ್ದಾರೆ.
ರೋಡ್ರಿಗೋ ಡ್ಯುಟರ್ಟೆ- ಡೊನಾಲ್ಡ್ ಟ್ರಂಪ್
ರೋಡ್ರಿಗೋ ಡ್ಯುಟರ್ಟೆ- ಡೊನಾಲ್ಡ್ ಟ್ರಂಪ್
ಮನಿಲಾ: ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆಗೆ ಅಮೆರಿಕಾಗೆ ಭೇಟಿ ನೀಡುವಂತೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನ ನೀಡಿದ್ದು, ಫಿಲಿಪೈನ್ಸ್ ನಲ್ಲಿ ನಡೆಯುತ್ತಿರುವ ಡ್ರಗ್ ವಿರೋಧಿ ಅಭಿಯಾನಕ್ಕೂ ಬೆಂಬಲ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ಅಭಿಯಾನವನ್ನು ಸರಿಯಾಗಿ ನಡೆಸುತ್ತಿದ್ದೀರಿ ಎಂದೂ ಹೊಗಳಿದ್ದಾರೆ. 
ಡೊನಾಲ್ಡ್ ಟ್ರಂಪ್ ಅವರೊಂದಿಗೆ ಡಿ.2 ರಂದು ದೂರವಾಣಿ ಮೂಲಕ ಮಾತನಾಡಿರುವ ಫಿಲಿಪೈನ್ಸ್ ಅಧ್ಯಕ್ಷ ಡ್ಯುಟರ್ಟೆ ಅಮೆರಿಕದ ನಿಯೋಜಿತ ಅಧ್ಯಕ್ಷರು ಡ್ರಗ್ಸ್ ಕುರಿತ ನಮ್ಮ ಆತಂಕಗಳಿಗೆ ಸಂವೇದನಾಶೀಲರಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ. ಸಾರ್ವಭೌಮ ರಾಷ್ಟ್ರವಾಗಿರುವ ಫಿಲಿಪೈನ್ಸ್ ಡ್ರಗ್ಸ್ ವಿರೋಧಿ ಅಭಿಯಾನವನ್ನು ಸರಿಯಾಗಿ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದೂ ಡ್ಯುಟರ್ಟೆ ತಿಳಿಸಿದ್ದಾರೆ. ಡ್ಯುಟರ್ಟೆ ಅಧಿಕಾರ ಸ್ವೀಕರಿಸಿದಾಗಿನಿಂದ ಫಿಲಿಪೈನ್ಸ್ ನಲ್ಲಿ ಡ್ರಗ್ಸ್ ವಿರೋಧಿ ಅಭಿಯಾನ ಪ್ರಾರಂಭವಾಗಿದ್ದು ಈ ವರೆಗೂ ನಡೆದಿರುವ ದಾಳಿಯಲ್ಲಿ ಒಟ್ಟು 2,000 ಜನರನ್ನು ಹತ್ಯೆ ಮಾಡಲಾಗಿದೆ.  
ಡ್ಯುಟರ್ಟೆ ಹೇಳಿಕೆ ಕುರಿತು ಟ್ರಂಪ್ ಟೀಂ ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಟ್ರಂಪ್ ನ ಅಧಿಕಾರ ಪರಿವರ್ತನೆಯಲ್ಲಿ ನಿರತವಾಗಿರುವ ಟ್ರಂಪ್ ಟೀಂ ಮಾಧ್ಯಮದವರ ಕೈಗೆ ಸಿಕ್ಕಿಲ್ಲ.  ಫಿಲಿಪೈನ್ಸ್ ತೈವಾನ್ ಸೇರಿದಂತೆ ವಿದೇಶಿ ನಾಯಕರೊಂದಿಗೆ ಡೊನಾಲ್ಡ್ ಟ್ರಂಪ್ ದೂರವಾಣಿ ಕರೆ ಮೂಲಕ ಮಾತನಾಡುತ್ತಿದ್ದು, ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಅಂತಾರಾಷ್ಟ್ರೀಯ ಸಮುದಾಯದ ವಿಶ್ವಾಸವನ್ನು ವೃದ್ಧಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com