ಟೈಮ್ ಮ್ಯಾಗಜಿನ್ 'ವರ್ಷದ ವ್ಯಕ್ತಿ'ಯಾಗಿ ಪ್ರಧಾನಿ ಮೋದಿ ಆಯ್ಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ 2016ನೇ ಸಾಲಿನ ಟೈಮ್ ಮ್ಯಾಗಜಿನ್ ವರ್ಷದ ವ್ಯಕ್ತಿಯಾಗಿ...
ಪ್ರಧಾನ ಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನ ಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ವಾಷಿಂಗ್ಟನ್: ಪ್ರಧಾನ ಮಂತ್ರಿ ನರೇಂದ್ರ ಮೋದಿ 2016ನೇ ಸಾಲಿನ ಟೈಮ್ ಮ್ಯಾಗಜಿನ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ಮಧ್ಯರಾತ್ರಿಗೆ ಓದುಗರ ಸಮೀಕ್ಷೆ ಮುಕ್ತಾಯವಾಗಿದ್ದು ಮೋದಿಯವರಿಗೆ ಶೇಕಡಾ 18ರಷ್ಟು ಮತಗಳು ಬಂದಿವೆ. ಟೈಮ್ ಮ್ಯಾಗಜೀನ್ ನ ವರ್ಷದ ವ್ಯಕ್ತಿಯನ್ನು ಇದೇ 7ರಂದು ಘೋಷಿಸಲಾಗುವುದು ಎಂದು ಟೈಮ್ ಮ್ಯಾಗಜಿನ್ ತಿಳಿಸಿದೆ. 
ಮೋದಿಯವರ ನಿಕಟ ಸ್ಪರ್ಧಿಗಳಾಗಿ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್, ಜುಲಿಯನ್ ಅಸ್ಸಂಜೆ ಇದ್ದರು. ಅವರೆಲ್ಲರಿಗೂ ಶೇಕಡಾ 7ರಷ್ಟು ಮತಗಳು ಬಂದಿವೆ. ಮಾರ್ಕ್ ಜುಗರ್ ಬರ್ಕ್ ಗೆ ಶೇಕಡಾ 2, ಹಿಲರಿ ಕ್ಲಿಂಟನ್ ಗೆ ಶೇಕಡಾ 4ರಷ್ಟು ಮತಗಳು ಸಿಕ್ಕಿವೆ. ಮೋದಿ ಅವರೆಲ್ಲರಿಗಿಂತ ಮುಂದಿದ್ದಾರೆ.
ಟೈಮ್ ವರ್ಷದ ವ್ಯಕ್ತಿಯಾಗಿ ಪ್ರಧಾನಿ ಮೋದಿಯವರು ಆಯ್ಕೆಯಾಗುತ್ತಿರುವುದು ಇದು ಎರಡನೇ ಸಲ. 2014ರಲ್ಲಿಯೂ ಅವರಿಗೆ ಜನ ಅವರನ್ನು ಆರಿಸಿದ್ದರು. ಸತತ 4ನೇ ವರ್ಷ ಮೋದಿಯವರು ಟೈಮ್ ವರ್ಷದ ವ್ಯಕ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 
ನಿರ್ದಿಷ್ಟ ವರ್ಷ ವಿಶ್ವದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ವ್ಯಕ್ತಿ ಮತ್ತು ಪ್ರಭಾವ ಬೀರಿದ ವ್ಯಕ್ತಿಯನ್ನು ಟೈಮ್ ಮ್ಯಾಗಜೀನ್ ವರ್ಷದ ವ್ಯಕ್ತಿಯಾಗಿ ಆರಿಸುತ್ತದೆ.ಕಳೆದ ವರ್ಷ ಜರ್ಮನ್ ಚಾನ್ಸೆಲರ್ ಅಂಜೆಲಾ ಮರ್ಕರ್ ಟೈಮ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com