ಸ್ವೀಡನ್ ನಲ್ಲಿ ಕಸದ ಕೊರತೆ; ಬೇರೆ ದೇಶಗಳಿಂದ ಆಮದು!

ಮಹಾನಗರ ಬೆಂಗಳೂರಲ್ಲಿ ಎಲ್ಲಿ ನೋಡಿದರಲ್ಲಿ ಕಸ. ಇಲ್ಲಿ ಕಸ ವಿಲೇವಾರಿ ಮಾಡುವುದು ಪ್ರತಿವರ್ಷ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಲಂಡನ್: ಮಹಾನಗರ ಬೆಂಗಳೂರಲ್ಲಿ ಎಲ್ಲಿ ನೋಡಿದರಲ್ಲಿ ಕಸ. ಇಲ್ಲಿ ಕಸ ವಿಲೇವಾರಿ ಮಾಡುವುದು ಪ್ರತಿವರ್ಷ ಕಾಡುವ ಸಮಸ್ಯೆ. ಇದು ಬೆಂಗಳೂರು ಮಾತ್ರವಲ್ಲ, ನಮ್ಮ ದೇಶದ ಬಹುತೇಕ ಮೆಟ್ರೊ ಸಿಟಿಗಳಲ್ಲಿ ತ್ಯಾಜ್ಯ ವಿಲೇವಾರಿ ಆಯಾ ಪಾಲಿಕೆಗಳಿಗೆ ದೊಡ್ಡ ತಲೆನೋವು. 
ಆದರೆ ಸ್ವೀಡನ್ ದೇಶದಲ್ಲಿ ತ್ಯಾಜ್ಯ ವಸ್ತುಗಳು ದೊರಕುವುದು ವಿರಳವಾಗುತ್ತಿದೆಯಂತೆ. ಇಲ್ಲಿನ ದೇಶೀ ನಿರ್ಮಿತ ಮರುಬಳಕೆ ಘಟಕ ಕಾರ್ಯನಿರ್ವಹಿಸಲು ಸ್ವೀಡನ್ ದೇಶ ಬೇರೆ ರಾಷ್ಟ್ರಗಳಿಂದ ಅನಿವಾರ್ಯವಾಗಿ ಕಸಗಳನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ನವೀಕರಿಸಬಹುದಾದ ವಸ್ತುಗಳಿಂದ ಒಟ್ಟಾರೆ ವಿದ್ಯುತ್ ಉತ್ಪಾದನೆಯ ಅರ್ಧದಷ್ಟನ್ನು ಸ್ವೀಡನ್ ತಯಾರು ಮಾಡುತ್ತಿದ್ದು 1991ರಲ್ಲಿ ಪಳೆಯುಳಿಕೆ ಇಂಧನಗಳ ಮೇಲೆ ಭಾರೀ ತೆರಿಗೆ ವಿಧಿಸಿದ ಮೊದಲ ದೇಶವಾಗಿದೆ.
ಸ್ವೀಡನ್ ನ ನವೀಕರಣ ವ್ಯವಸ್ಥೆ ಎಷ್ಟು ಅತ್ಯಾಧುನಿಕವಾಗಿದೆಯೆಂದರೆ ದಿನಬಳಕೆ ತ್ಯಾಜ್ಯದಲ್ಲಿ ಶೇಕಡಾ 1ಕ್ಕಿಂತ ಕಡಿಮೆ ವಸ್ತುವನ್ನು ಹೊರಗೆ ಎಸೆಯಲಾಗಿತ್ತಷ್ಟೆ. ಬಾಕಿ ಉಳಿದ ತ್ಯಾಜ್ಯಗಳನ್ನು ನವೀಕರಣ ಇಂಧನ ಮೂಲಕ್ಕೆ ಕಳುಹಿಸಲಾಗಿತ್ತು. 
ಸ್ವೀಡನ್ ದೇಶದವರು ಪರಿಸರದ ಬಗ್ಗೆ ತುಂಬಾ ಕಾಳಜಿ ವಹಿಸಿಕೊಂಡಿರುತ್ತಾರೆ. ಪ್ರಕೃತಿ ಮತ್ತು ಪರಿಸರದ ರಕ್ಷಣೆಗೆ ಏನೇನು ಮಾಡಬೇಕೆಂಬುದರ ಬಗ್ಗೆ ಅಲ್ಲಿನ ಪ್ರಜೆಗಳಿಗೆ ಚೆನ್ನಾಗಿ ಅರಿವಿದೆ. ದಿನಬಳಕೆಯ ತ್ಯಾಜ್ಯಗಳನ್ನು ಹೊರಗೆ ಎಸೆಯದಂತೆ ಅವುಗಳನ್ನು ಮರುಬಳಕೆ ಮಾಡಲು ಉಪಯೋಗಿಸುವಂತೆ ಜನರಿಗೆ ಅರಿವು ಮೂಡಿಸುತ್ತೇವೆ ಎನ್ನುತ್ತಾರೆ ಸ್ವೀಡನ್ ನ ತ್ಯಾಜ್ಯ ನಿರ್ವಹಣಾ ಮರುಬಳಕೆ ಅಸೋಸಿಯೇಷನ್ ನ ಸಂವಹನ ನಿರ್ದೇಶಕಿ ಅನ್ನಾ-ಕಾರಿನ್ ಗ್ರಿಪ್ ವಾಲ್.
ಸ್ವೀಡನ್ ಸಂಘಟನಾತ್ಮಕ  ರಾಷ್ಟ್ರೀಯ ಮರುಬಳಕೆ ನೀತಿಯನ್ನು ಜಾರಿಗೆ ತಂದಿದ್ದು ಬಹುತೇಕ ತ್ಯಾಜ್ಯಗಳನ್ನು ಖಾಸಗಿ ಕಂಪೆನಿಗಳೇ ಆಮದು ಮಾಡಿಕೊಂಡು ಅದನ್ನು ಸುಡುತ್ತಿದ್ದರೂ ಕೂಡ ತ್ಯಾಜ್ಯದ ಮರುಬಳಕೆಯ ಇಂಧನವನ್ನು ರಾಷ್ಟ್ರೀಯ ತಾಪ ಸಂಪರ್ಕ ಜಾಲಕ್ಕೆ ಸೇರಿಸಲಾಗಿದೆ. ತೀವ್ರ ಚಳಿಗಾಲದಲ್ಲಿ ಕೂಡ ತ್ಯಾಜ್ಯ ಮರುಬಳಕೆಯ ಇಂಧನದಿಂದ ವಿದ್ಯುತ್ ಉರಿಸಲಾಗುತ್ತದೆ.
ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿ ತ್ಯಾಜ್ಯಗಳನ್ನು ನೆಲದ ಮೇಲೆಸೆಯುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಜನರು ದಂಡ ಕಟ್ಟುವ ಬದಲು ನವೀಕರಣ ತ್ಯಾಜ್ಯ ಘಟಕಗಳಿಗೆ ಕಳುಹಿಸುತ್ತಾರೆ. ಕೆಲವು ಐರೋಪ್ಯ ರಾಷ್ಟ್ರಗಳಲ್ಲಿ ಜನರು ತಾವೇ ಸ್ವತಃ ನವೀಕರಣ ಘಟಕಗಳನ್ನು ನಿರ್ಮಿಸುತ್ತಾರೆ. ಸ್ವೀಡನ್ ನಲ್ಲಿಯೂ ಇದನ್ನು ಜಾರಿಗೆ ತರಲು ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಸ್ವೀಡನ್ ಮಹಾನಗರ ಪಾಲಿಕೆ ಫ್ಯೂಚರಿಸ್ಟಿಕ್ ತ್ಯಾಜ್ಯ ಸಂಗ್ರಹ ತಂತ್ರಗಳಲ್ಲಿ ಹೂಡಿಕೆ ಮಾಡುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com