ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ರಿಯೊ ಡಿ ಜನೈರೊ ನಗರ

ಗ್ರಾನೈಟ್ ಬಂಡೆಗಳು, ನಗರ ಮಳೆಕಾಡು ಮತ್ತು ಕಡಲತೀರಗಳಿಂದ ಕಂಗೊಳಿಸುತ್ತಿರುವ...
ರಿಯೊ ಡಿ ಜನೈರೊ(ಸಂಗ್ರಹ ಚಿತ್ರ)
ರಿಯೊ ಡಿ ಜನೈರೊ(ಸಂಗ್ರಹ ಚಿತ್ರ)
ರಿಯೊ ಡಿ ಜನೈರೊ: ಗ್ರಾನೈಟ್ ಬಂಡೆಗಳು, ನಗರ ಮಳೆಕಾಡು ಮತ್ತು ಕಡಲತೀರಗಳು, ನೈಸರ್ಗಿಕ ಸೌಂದರ್ಯಗಳಿಂದ ಕಂಗೊಳಿಸುತ್ತಿರುವ ರಿಯೊ ಡಿ ಜನೈರೊ ವಿಶ್ವಸಂಸ್ಥೆಯ ಯುನೆಸ್ಕೊ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.
ವಿಶ್ವಸಂಸ್ಥೆಯ ಸಾಂಸ್ಕೃತಿಕ ಅಂಗ ಯುನೆಸ್ಕೊ, ರಿಯೊವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಅಲ್ಲಿನ ಮಾನವ ನಿರ್ಮಿತ ಮತ್ತು ನೈಸರ್ಗಿಕ ಸೌಂದರ್ಯಗಳನ್ನು ಅಸಾಮಾನ್ಯವಾಗಿ ಸಮ್ಮಿಳಿತಗೊಳಿಸಲಾಗಿದೆ ಎಂದು ನಿನ್ನೆ ಕ್ರಿಸ್ಟ್ ಮತ್ತು ರಿಡೀಮರ್ ಸ್ಮಾರಕದ ಬಳಿ ನಡೆದ ಸಮಾರಂಭದಲ್ಲಿ ಹೇಳಿದರು.
ನಗರದ ಭೂದೃಶ್ಯದಲ್ಲಿ ಅನೇಕ ಪ್ರವಾಸಿಗರು ಮತ್ತು ಬರಹಗಾರರನ್ನು ಸೇರಿಸಲಾಗಿದ್ದು ಅದು ನಗರದ ಸೌಂದರ್ಯವನ್ನು ಹೆಚ್ಚಿಸಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 2014ರ ಫುಟ್ ಬಾಲ್ ವಿಶ್ವಕಪ್ ನ ಸಂದರ್ಭದಲ್ಲಿ ಮತ್ತು ಕಳೆದ ಆಗಸ್ಟ್ ನಲ್ಲಿ ಒಲಿಂಪಿಕ್ ಕ್ರೀಡಾಕೂಟದ ವೇಳೆ ರಿಯೊಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಹೋಗಿದ್ದರು. ಆದರೂ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವುದು, ಕಳೆದ ವರ್ಷದ ಝೀಕಾ ಸಾಂಕ್ರಾಮಿಕ, ರಾಜಕೀಯ ಅಸ್ಥಿರತೆ ನಗರದ ಸೌಂದರ್ಯಕ್ಕೆ ಸ್ವಲ್ಪ ಮಟ್ಟಿನ ಹಾನಿಯನ್ನುಂಟುಮಾಡಿದೆ.
ರಿಯೊ ಡಿ ಜನೈರೊ ನಗರಕ್ಕೆ ಯುನೆಸ್ಕೊ ಮಾನ್ಯತೆಯನ್ನು 2012ರಲ್ಲಿ ನೀಡಲಾಗಿತ್ತು. ಆದರೆ ಬ್ರೆಝಿಲ್ ನ ಅಧಿಕಾರಿಗಳು ಫ್ಲೆಮೆಂಗೊ ಪಾರ್ಕ್, ಶುಗರ್ ಲೋಫ್ ಪರ್ವತ, ಕೊರ್ಕವಡೊ, ಕೊಪಕಬಾನ ಸಮುದ್ರ, ಬೊಟಾನಿಕಲ್ ಗಾರ್ಡನ್ ಮತ್ತು ತಿಜುಕಾ ಅರಣ್ಯವನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂಬ ಬಗ್ಗೆ ವರದಿ ಸಲ್ಲಿಸಲು 4 ವರ್ಷಗಳ ಕಾಲ ಸಮಯ ನೀಡಲಾಗಿತ್ತು. ಹೀಗಾಗಿ ಈ ವರ್ಷ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ರಿಯೊದ ಹೆಸರು ಅಧಿಕೃತವಾಗಿ ಸೇರಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com