ಪಲೊ ಅಲ್ಟೊ: ಕ್ಯಾಲಿಫೋರ್ನಿಯಾದ ಸಯಾಮಿ ಅವಳಿಗಳಿಗೆ ಕಳೆದ ವಾರ ಸತತ 17 ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿದ ನಂತರ ಇದೀಗ ಕುಟುಂಬದವರ ಜೊತೆ ಸೇರಿಸಲಾಗಿದೆ.
ಇವಾ ಮತ್ತು ಸಂಡೊವಲ್ ಪ್ರತ್ಯೇಕ ಬೆಡ್ ಗಳಲ್ಲಿ ಒಂದೇ ಕೊಠಡಿಯಲ್ಲಿ ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಒಬ್ಬರಿಗೊಬ್ಬರನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮೊನ್ನೆ ಸೋಮವಾರ ಮಕ್ಕಳ ಪೋಷಕರು ಮತ್ತು ತೀವ್ರ ನಿಗಾ ಘಟಕದ ಸಿಬ್ಬಂದಿ ಜಾಗ್ರತೆಯಿಂದ ಎರಿಕಾಳನ್ನು ಎತ್ತಿಕೊಂಡು ಹೋಗಿ ಇವಾ ಬೆಡ್ ನಲ್ಲಿ ಕೂರಿಸಿ ಹಲೋ ಹೇಳಿಸಿದರು ಎಂದು ಲುಸಿಲೆ ಪಕಾರ್ಡ್ ಮಕ್ಕಳ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇವರಿಬ್ಬರನ್ನು ಡಿಸೆಂಬರ್ 6ರಂದು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲಾಯಿತು.
ಇಷ್ಟು ದೇಹ ದೇಹವೊಂದೇ ಮುಖ ಎರಡು ಹೊಂದಿದ್ದ ಮಕ್ಕಳನ್ನು ಬೇರೆ ಬೇರೆಯಾಗಿ ನೋಡಲು ಖುಷಿಯಾಗುತ್ತದೆ ಎನ್ನುತ್ತಾರೆ ಅವಳಿ ಮಕ್ಕಳ ತಾಯಿ ಐದಾ ಸಂಡೊವಲ್.
ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಎರಿಕಾಳನ್ನು ನೋಡಿಕೊಳ್ಳುತ್ತಿರುವ ವೈದ್ಯ ಡಾ.ಮೇಘನಾ ಪಟೇಲ್, ಇಬ್ಬರೂ ಆರೋಗ್ಯವಾಗಿದ್ದಾರೆ.ಅವರಿಗೆ ಯಾವುದೇ ಸಂಕೀರ್ಣ ಖಾಯಿಲೆಗಳಿರಲಿಲ್ಲ ಎಂದಿದ್ದಾರೆ.
ಈ ಸಯಾಮಿ ಅವಳಿಗಳನ್ನು ಬೇರ್ಪಡಿಸುವ ಮುನ್ನ ಮೂತ್ರಕೋಶ, ಯಕೃತ್ತು, ಜೀರ್ಣ ವ್ಯವಸ್ಥೆ ಮತ್ತು ಮೂರನೇ ಕಾಲುಗಳನ್ನು ಹಂಚಿಕೊಂಡಿದ್ದರು.ಪ್ರತಿಯೊಂದು ಅಂಗಾಂಗಳ ಒಂದೊಂದು ಭಾಗವನ್ನು ಇಬ್ಬರೂ ಹೊಂದಿದ್ದರು.
ಎರಡು ವರ್ಷ ಪ್ರಾಯದ ಈ ಮಕ್ಕಳು ವೆಂಟಿಲೇಟರ್ ಇಲ್ಲದೆಯೇ ಉಸಿರಾಡುತ್ತಿದ್ದಾರೆ, ಇನ್ನೊಂದು ವಾರದಲ್ಲಿ ತೀವ್ರ ನಿಗಾ ಘಟಕದಿಂದ ಹೊರಬರಬಹುದು ಎಂದು ವೈದ್ಯರು ಹೇಳುತ್ತಾರೆ.
ಸಯಾಮಿ ಅವಳಿಗಳು ಹುಟ್ಟುವುದು ವಿರಳವಾಗಿದ್ದು ಪ್ರತಿ 2 ಲಕ್ಷ ಮಕ್ಕಳಿಗೊಬ್ಬರು ಹುಟ್ಟುತ್ತಾರೆ. ಶೇಕಡಾ 50ರಷ್ಟು ಮಕ್ಕಳು ಹುಟ್ಟುವಾಗಲೇ ಸಾಯುತ್ತಿದ್ದು, ಶೇಕಡಾ 35ರಷ್ಟು ಮಕ್ಕಳು ಕೇವಲ ಒಂದು ದಿನ ಬದುಕುತ್ತಾರೆ ಎನ್ನುತ್ತಾರೆ ಮೇರಿಲ್ಯಾಂಡ್ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯ.