ಯುದ್ಧದಿಂದ ಕಂಗೆಟ್ಟಿರುವ ಸಿರಿಯಾದ ನಗರ ಅಲೆಪ್ಪೊನಲ್ಲಿ ಜನರ ರಕ್ಷಣಾ ಕಾರ್ಯ ಸೋಮವಾರ ಮತ್ತೆ ಪ್ರಾರಂಭವಾಗಿದ್ದು, ೩೫೦೦ ಜನ ಆ ಪ್ರದೇಶ ತೊರೆದಿದ್ದಾರೆ ಎಂದು ಬ್ರಿಟಿಷ್ ವಾರ್ ಮಾನಿಟರ್ ತಿಳಿಸಿದೆ.
ದಮಾಸ್ಕಸ್: ಯುದ್ಧದಿಂದ ಕಂಗೆಟ್ಟಿರುವ ಸಿರಿಯಾದ ನಗರ ಅಲೆಪ್ಪೊನಲ್ಲಿ ಜನರ ರಕ್ಷಣಾ ಕಾರ್ಯ ಸೋಮವಾರ ಮತ್ತೆ ಪ್ರಾರಂಭವಾಗಿದ್ದು, ೩೫೦೦ ಜನ ಆ ಪ್ರದೇಶ ತೊರೆದಿದ್ದಾರೆ ಎಂದು ಬ್ರಿಟಿಷ್ ವಾರ್ ಮಾನಿಟರ್ ತಿಳಿಸಿದೆ.
ಬಂಡುಕೋರರು ವಶಪಡಿಸಿಕೊಂಡಿರುವ ಸಿರಿಯಾದ ಅತಿ ದೊಡ್ಡ ನಗರ ಅಲೆಪ್ಪೊದಿಂದ ೬೫ ಬಸ್ಸುಗಳು ಹೊರಟಿವೆ ಎಂದು ಸಿರಿಯಾ ಮಾನವ ಹಕ್ಕುಗಳ ಪರಿವೀಕ್ಷಣಾ ಸಂಸ್ಥೆ (ಎಸ್ ಒ ಎಚ್ ಆರ್) ತಿಳಿಸಿದೆ.
ಸಿರಿಯಾದ ವಿರೋಧಿ ಟರ್ಕಿ ಮತ್ತು ಸಿರಿಯಾ ಸರ್ಕಾರದ ಪರ ಇರುವ ರಷ್ಯಾ ಮತ್ತು ಇರಾನ್ ದೇಶಗಳ ಒಟ್ಟುಗೂಡಿ ಈ ರಕ್ಷಣಾ ಕಾರ್ಯಾಚಾರಣೆಗೆ ಮುಂದಾಗಿವೆ.
ಶುಕ್ರವಾರ ಈ ಒಪ್ಪಂದ ವಿಫಲವಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ರದ್ದಾಗಿತ್ತು, ಆದರೆ ಶನಿವಾರ ನೂತನ ಒಪ್ಪಂದಕ್ಕೆ ಎಲ್ಲರು ಒಪ್ಪಿಕೊಂಡು ಅಲ್ಲೆಪ್ಪೋ ಸೇರಿದಂತೆ ಫುವಾ ಮತ್ತು ಕೆರಫಿಯಾದಿಂದಲೂ ರಕ್ಷಣಾ ಕಾರ್ಯಾಚರಣೆಗಳಿಗೆ ಮುಂದಾಗಿವೆ.
ಈ ರಕ್ಷಣಾ ಕಾರ್ಯಾಚರಣೆಗೆ ತಡೆಯೊಡ್ಡಿದ್ದ ಜುಂದ್ ಆಲ್ ಅಸ್ಕಾ ಎಂಬ ಭಯೋತ್ಪಾದಕ್ ಸಂಸ್ಥೆಯ ಸದಸ್ಯರು ಭಾನುವಾರ ಎರಡು ಬಸ್ಸುಗಳನ್ನು ಸುಟ್ಟುಹಾಕಿದ್ದರು.