ದಲೈಲಾಮಾ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದ ನಡೆಗೆ ಬೀಜಿಂಗ್ ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಮಂಗೋಲಿಯಾ, ಟಿಬೆಟ್ ನ ಆಧ್ಯಾತ್ಮ ಗುರುವಿಗೆ ತಮ್ಮ ದೇಶದ ಪ್ರವಾಸಕ್ಕೆ ಇನ್ನೆಂದಿಗೂ
ಉಲಾನ್ ಬ್ಯಾಟರ್: ದಲೈಲಾಮಾ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದ ನಡೆಗೆ ಬೀಜಿಂಗ್ ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಮಂಗೋಲಿಯಾ, ಟಿಬೆಟ್ ನ ಆಧ್ಯಾತ್ಮ ಗುರುವಿಗೆ ತಮ್ಮ ದೇಶದ ಪ್ರವಾಸಕ್ಕೆ ಇನ್ನೆಂದಿಗೂ ಅವಕಾಶ ನೀಡುವುದಿಲ್ಲ ಎಂದಿದೆ.
ಇನ್ನು ಮುಂದೆ ಧಾರ್ಮಿಕ ಕಾರ್ಯಗಳಿಗೆ ಕೂಡ, ಮಂಗೋಲಿಯಾ ಪ್ರವಾಸಕ್ಕೆ ದಲೈಲಾಮಾ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಮಂಗೋಲಿಯಾ ವಿದೇಶಾಂಗ ಸಚಿವ ಟ್ಸಎಂಡ್ ಮುಂಖ್-ಆರ್ಗಿಲ್ ಹೇಳಿದ್ದಾರೆ.
ಬುಧವಾರ ಮಂಗೋಲಿಯಾ ಈ ಪ್ರತಿಕ್ರಿಯೆ ನೀಡಿದೆ.
ಬೀಜಿಂಗ್ ತೀವ್ರ ವಿರೋಧದ ನಡುವೆಯೂ ದಲೈಲಾಮಾ ಕಳೆದ ತಿಂಗಳು ಮಂಗೋಲಿಯಾಗೆ ಭೇಟಿ ನೀಡಿ ಬೌದ್ಧ ಸಮಾಜದ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದರು.
ಇದರ ನಂತರ ಚೈನಾ ಮಂಗೋಲಿಯಾ ಗಡಿಯಲ್ಲಿ, ತಡೆ ಹಾಕಿದ್ದು, ಟ್ರಕ್ ಗಳ ಓಡಾಟವನ್ನು ತಡೆದಿತ್ತು. ಇದರಿಂದ ದೇಶಕ್ಕೆ ತೀವ್ರ ಆರ್ಥಿಕ ಹಿನ್ನಡೆಯಾಗಿದೆ ಎಂದು ಮಂಗೋಲಿಯಾ ಹೇಳಿತ್ತು.
ಮಂಗೋಲಿಯಾ ಟ್ರಕ್ ಗಳ ಓಡಾಟದ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಿರುವ ಬೀಜಿಂಗ್ ನಡೆಯಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಲು ಮಂಗೋಲಿಯಾ ದೇಶ ಭಾರತಕ್ಕೆ ಮನವಿ ಮಾಡಿದೆ.
೧೯೫೯ ರಿಂದ ಟಿಬೆಟ್ ತೊರೆದಾಗಿಲಿಂದಲೂ ದಲೈಲಾಮ ಭಾರತದಲ್ಲಿ ರಾಜಕೀಯ ಆಶ್ರಯ ಪಡೆದು ವಾಸಿಸುತ್ತಿದ್ದಾರೆ.