ನಾಕ್ ಟೆನ್ ಚಂಡಮಾರುತ: ಫಿಲಿಪ್ಪೀನ್ಸ್‌ನಲ್ಲಿ 6 ಮಂದಿ ಸಾವು, 18 ನಾಪತ್ತೆ

ಕ್ರಿಸ್ಮಸ್ ರಜೆ ಸಂಭ್ರಮದಲ್ಲಿದ್ದ ಫಿಲಿಪ್ಪೀನ್ಸ್ ಗೆ ನಾಕ್ ಟೆನ್ ಚಂಡಮಾರುತ ಅಪ್ಪಳಿಸಿದ್ದು ಪರಿಣಾಮ 6 ಮಂದಿ ಸಾವನ್ನಪ್ಪಿದ್ದು 18 ಮಂದಿ ನಾಪತ್ತೆಯಾಗಿದ್ದಾರೆ ಎಂದು...
ಫಿಲಿಪ್ಪೀನ್ಸ್
ಫಿಲಿಪ್ಪೀನ್ಸ್
ಮನಿಲಾ: ಕ್ರಿಸ್ಮಸ್ ರಜೆ ಸಂಭ್ರಮದಲ್ಲಿದ್ದ ಫಿಲಿಪ್ಪೀನ್ಸ್ ಗೆ ನಾಕ್ ಟೆನ್ ಚಂಡಮಾರುತ ಅಪ್ಪಳಿಸಿದ್ದು ಪರಿಣಾಮ 6 ಮಂದಿ ಸಾವನ್ನಪ್ಪಿದ್ದು 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಹೇಳಿದೆ. 
ಕ್ರಿಸ್ಮಸ್ ಹಬ್ಬದ ದಿನ ಫಿಲಿಪ್ಪೀನ್ಸ್ ಪೂರ್ವ ಕರಾವಳಿಗೆ ಚಂಡಮಾರುತ ಅಪ್ಪಳಿಸಿದ್ದು ಪರಿಣಾಮ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ರಸ್ತೆಗಳು ಜಲಾವೃತಗೊಂಡಿದ್ದವು. ಚಂಡಮಾರುತದ ಅಬ್ಬರಕ್ಕೆ ಮನೆಗಳು, ಮರಗಳು, ಹಡಗುಗಳು ಜಖಂ ಆಗಿವೆ ಎಂದು ಫಿಲಿಪ್ಪೀನ್ಸ್ ಸರ್ಕಾರ ಹೇಳಿದೆ. 
ನಾಕ್ ಟೆನ್ ಚಂಡಮಾರುತ ಅಪ್ಪಳಿಸುವ ಸೂಚನೆ ಹಿನ್ನೆಲೆ ಫಿಲಿಪ್ಪೀನ್ಸ್ ಸರ್ಕಾರ ಮುಜಾಗ್ರತ ಕ್ರಮವಾಗಿ 4 ಲಕ್ಷದ 30 ಸಾವಿರ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿತ್ತು. ಈ ಕಾರಣದಿಂದಾಗಿ ಹೆಚ್ಚಿನ ಸಾವು ನೋವು ಸಂಭವಿಸಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com