ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ರೋಡ್ರಿಗೋ ಡ್ಯುಟರ್ಟೆ ಭ್ರಷ್ಟಾ ಅಧಿಕಾರಿಗಳನ್ನು ಹೆಲಿಕಾಫ್ಟರ್ ನಲ್ಲಿ ಕರೆದೊಯ್ದು ಫಿಲಿಪೈನ್ಸ್ ರಾಜಧಾನಿ ಮನೀಲಾಗೆ ತಳ್ಳುವುದಾಗಿ ಡ್ಯುಟರ್ಟೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಈ ಹಿಂದೆಯೂ ಈ ರೀತಿ ಮಾಡಿರುವುದಾಗಿ ಹೇಳಿರುವ ಡ್ಯುಟರ್ಟೆ ಈ ಹಿಂದೆ ಅಪಹರಣಕಾರರನ್ನು ಹೆಲಿಕಾಫ್ಟರ್ ನಿಂದ ಕೆಳಗೆ ತಳ್ಳಿದ್ದೆ, ಈಗೇಕೆ ಭ್ರಷ್ಟ ಅಧಿಕಾರಿಗಳು ಹಾಗೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.