ಅಮೆರಿಕಾದಿಂದ ರಷ್ಯಾ ವಿರುದ್ಧ ನಿರ್ಬಂಧ: ವ್ಲಾದಿಮಿರ್ ಪುಟಿನ್ ಚತುರ ನಾಯಕ- ಟ್ರಂಪ್ ಬಣ್ಣನೆ

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಚತುರ ಎಂದು ಬಣ್ಣಿಸಿದ್ದಾರೆ.
ವ್ಲಾದಿಮಿರ್ ಪುಟಿನ್- ಡೊನಾಲ್ಡ್ ಟ್ರಂಪ್
ವ್ಲಾದಿಮಿರ್ ಪುಟಿನ್- ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಸೈಬರ್‌ ದಾಳಿ ನಡೆಸಿದ್ದ ಆರೋಪಕ್ಕೆ ಗುರಿಯಾಗಿರುವ ರಷ್ಯಾದ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಉಚ್ಚಾಟಿಸಿದ ಬೆನ್ನಲ್ಲೇ, ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಚತುರ ಎಂದು ಬಣ್ಣಿಸಿದ್ದಾರೆ. 
ರಷ್ಯಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಬರಾಕ್ ಒಬಾಮ ಆಡಳಿತ, ಅಮೆರಿಕಾದಲ್ಲಿದ್ದ ರಷ್ಯಾದ ರಾಯಭಾರಿ ಕಚೇರಿಯ 35 ಕ್ಕೂ ಹೆಚ್ಚು ಅಧಿಕಾರಿಗಳನ್ನು ಉಚ್ಚಾಟಿಸಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವ್ಲಾದಿಮಿರ್ ಪುಟಿನ್ ತಾವು ಅಮೆರಿಕದ ಅಧಿಕಾರಿಗಳನ್ನು ಉಚ್ಚಾಟಿಸುವುದಿಲ್ಲ ಎಂದು ಹೇಳಿದ್ದರು. ವ್ಲಾದಿಮಿರ್ ಪುಟಿನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ಪುಟಿನ್ ಅವರದ್ದು ಅದ್ಭುತ ನಿರ್ಧಾರವಾಗಿದ್ದು, ಚತುರ ನಾಯಕ ಎಂದು  ನನಗೆ ತಿಳಿದಿತ್ತು ಎಂದಿದ್ದಾರೆ. 
ಅಧಿಕಾರದಿಂದ ನಿರ್ಗಮಿಸುವುದಕ್ಕೂ ಕೇವಲ ಮೂರು ವಾರಗಳ ಮುನ್ನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ರಷ್ಯಾದ ಅಧಿಕಾರಿಗಳನ್ನು ಉಚ್ಚಾಟಿಸಿ ರಷ್ಯಾ ವಿರುದ್ಧ ನಿರ್ಬಂಧ ವಿಧಿಸಿದ್ದಾರೆ. 9 ರಷ್ಯಾದ ಸಂಸ್ಥೆಗಳು ಹಾಗೂ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com