ಇಸೀಸ್ ಉಗ್ರರು
ಇಸೀಸ್ ಉಗ್ರರು

ಇಸೀಸ್ ನಿಂದ ಶಿರಚ್ಛೇಧಕ್ಕೊಳಗಾದ 20 ಉಗ್ರರ ಪೈಕಿ 4 ಭಾರತೀಯ ಉಗ್ರರು?

ಇಸೀಸ್ ನಿಂದ ಪರಾರಿಯಾಗಲು ಯತ್ನಿಸುತ್ತಿದ್ದ 20 ಉಗ್ರ ಸಹಚರರನ್ನು ಸ್ವತಃ ಇಸೀಸ್ ಉಗ್ರ ಸಂಘಟನೆಯೇ ಶಿರಚ್ಛೇಧ ಮಾಡಿ ಹತ್ಯೆ ಮಾಡಿದೆ.
Published on

ನವದೆಹಲಿ: ಇಸೀಸ್ ನಿಂದ ಪರಾರಿಯಾಗಲು ಯತ್ನಿಸುತ್ತಿದ್ದ  20 ಉಗ್ರ ಸಹಚರರನ್ನು ಸ್ವತಃ ಇಸೀಸ್ ಉಗ್ರ ಸಂಘಟನೆಯೇ ಶಿರಚ್ಛೇಧ ಮಾಡಿ ಹತ್ಯೆ ಮಾಡಿದೆ.
ಹತ್ಯೆಯಾದ 20 ಉಗ್ರರ ಪೈಕಿ 4 ಉಗ್ರರು ಭಾರತೀಯರೆಂದು ಶಂಕಿಸಲಾಗಿದ್ದು, ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕಲೆಹಾಕುತ್ತಿದೆ. ಹತ್ಯೆಗೀಡದವರ ಪೈಕಿ ಇದ್ದವರು ಭಾರತೀಯರೆ ಎಂಬುದನ್ನು ಈವರೆಗೂ ಭಾರತ ಸರ್ಕಾರ ಸ್ಪಷ್ಟಪಡಿಸಿಲ್ಲ.
ಇರಾಕ್ ನ ಮೊಸುಲ್ ನಗರದಿಂದ ಭಾರತೀಯ ಉಗ್ರರು ಸೇರಿದಂತೆ 20 ಉಗ್ರರು ಪರಾರಿಯಾಗಲು ಯತ್ನಿಸಿದ್ದರು. ಆದರೆ ಚೆಕ್ ಪಾಯಿಂಟ್ ನಲ್ಲಿ ತಪಾಸಣೆ ವೇಳೆ 20 ಜನ ಸಿಕ್ಕಿಬಿದಿದ್ದರು. ಪರಿಶೀಲನೆ ವೇಳೆ ಅವರೆಲ್ಲಾ ತಮ್ಮದೇ ಉಗ್ರ ಸಂಘಟನೆಯ ಕಾರ್ಯಕರ್ತರು ಎಂಬುದು ಇಸೀಸ್ ಉಗ್ರರಿಗೆ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಕ್ಕಿಬಿದ್ದಿದ್ದ ಉಗ್ರರನ್ನು ಶರಿಯಾ ಕೋರ್ಟ್ ಗೆ ವಿಚಾರಣೆಗಾಗಿ ಕಳಿಸಲಾಗಿತ್ತು.
ವಿಚಾರಣೆ ವೇಳೆ ಇಸೀಸ್ ಉಗ್ರ ಸಂಘಟನೆಯಿಂದ ಪರಾರಿಯಾಗಲು ಯತ್ನಿಸಿದ್ದನ್ನು ರಾಜಧ್ರೋಹವೆಂದು ತೀರ್ಪು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರೆದುರೇ 20 ಉಗ್ರರ ರುಂಡ ಕತ್ತರಿಸಿ ಹತ್ಯೆ ಮಾಡಲಾಗಿದೆ.  ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ  ಈ ವರೆಗೆ 23 ಭಾರತೀಯರು ಇಸೀಸ್ ಉಗ್ರ ಸಂಘಟನೆ ಸೇರಿದ್ದಾರೆ ಈ ಪೈಕಿ ಈಗಾಗಲೇ 6 ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com