ಅಮೆರಿಕದ ಕಾರ್ನೆಲ್ ವಿವಿಯ ಬಿಸಿನೆಸ್ ಕಾಲೇಜಿಗೆ ಭಾರತೀಯ ಮೂಲದ ಸುಮಿತ್ರಾ ದತ್ತಾ ಡೀನ್

ಅಮೆರಿಕದಲ್ಲಿರುವ ಕಾರ್ನೆಲ್ ವಿಶ್ವವಿದ್ಯಾಲಯ ನೂತನವಾಗಿ ಆರಂಭಿಸಲಿರುವ ಬಿಸಿನೆಸ್ ಕಾಲೇಜಿಗೆ ಭಾರತೀಯ ಮೂಲದ...
ಸುಮಿತ್ರಾ ದತ್ತಾ
ಸುಮಿತ್ರಾ ದತ್ತಾ
Updated on: 
ನ್ಯೂಯಾರ್ಕ್: ಅಮೆರಿಕದಲ್ಲಿರುವ ಕಾರ್ನೆಲ್ ವಿಶ್ವವಿದ್ಯಾಲಯ ನೂತನವಾಗಿ ಆರಂಭಿಸಲಿರುವ ಬಿಸಿನೆಸ್ ಕಾಲೇಜಿಗೆ ಭಾರತೀಯ ಮೂಲದ ಸುಮಿತ್ರಾ ದತ್ತಾ ಅವರನ್ನು ಡೀನ್ ಆಗಿ ನೇಮಕ ಮಾಡಲಾಗಿದೆ.
ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸುಮಿತ್ರಾ ದತ್ತಾ ಅವರು ಸೇವೆ ಸಲ್ಲಿಸುತ್ತಿದ್ದಾರೆ. ವ್ಯವಹಾರ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಬಳಕೆಯ ಮೂಲಕ ಹೆಸರು ಮಾಡಿರುವ ದತ್ತಾ ದೆಹಲಿ ಐಐಟಿಯ ಹಳೆ ವಿದ್ಯಾರ್ಥಿ. 
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಬಿಸಿನೆಸ್ ಕಾಲೇಜು ಪ್ರಾರಂಭಗೊಳ್ಳಲಿದ್ದು, ಸಂಶೋಧನಾ ನಿರ್ವಹಣೆ ಮತ್ತು ಉದ್ಯಮಶೀಲತೆ ವಿಷಯಗಳಲ್ಲಿ ಶಿಕ್ಷಣ ನೀಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com