ಝಿಕಾ ವೈರಸ್ ನಿಂದ ಮಕ್ಕಳಿಗೆ ಕಣ್ಣಿನ ದೋಷ

ದಕ್ಷಿಣ ಅಮೆರಿಕದಲ್ಲಿ ವ್ಯಾಪಕವಾಗಿ ಹರಡಿರುವ ಮಾರಕ ಝಿಕಾ ವೈರಾಣು ರೋಗದಿಂದ ಮಕ್ಕಳಿಗೆ ದೃಷ್ಟಿ ದೋಷವೂ ಉಂಟಾಗುತ್ತದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ದಕ್ಷಿಣ ಅಮೆರಿಕದಲ್ಲಿ ವ್ಯಾಪಕವಾಗಿ ಹರಡಿರುವ ಮಾರಕ ಝಿಕಾ ವೈರಾಣು ರೋಗದಿಂದ ಮಕ್ಕಳಿಗೆ ದೃಷ್ಟಿ ದೋಷವೂ ಉಂಟಾಗುತ್ತದೆ ಎಂದು ವರದಿಗಳು ಹೇಳಿವೆ. 
ನವಜಾತ ಶಿಶುವಿನ ತಲೆ ಮತ್ತು ಮಿದುಳು ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಬಿಡದ ಝಿಕಾ ವೈರಸ್ ಮಗುವಿನ ದೃಷ್ಟಿ ದೋಷ ಉಂಟು ಮಾಡುತ್ತದೆ ಸಂಶೋಧನೆ ಹೇಳಿದೆ. 
ಝಿಕಾ ವೈರಸ್ ಗೆ ಒಳಗಾದ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ದೃಷ್ಟಿ ದೋಷ ಉಂಟಾಗಿರುವುದು ತಿಳಿದು ಬಂದಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ.  
ಈ ಹಿಂದೆ ಲೈಂಗಿಕ ಕ್ರಿಯೆ ಮೂಲಕ ಝಿಕಾ ಹರಡುತ್ತದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಇದೀಗ ಮತ್ತೊಂದು ವೈದ್ಯಕೀಯ ವರದಿಯ ಪ್ರಕಾರ, ಮನುಷ್ಯರ ಜೊಲ್ಲುರಸ, ಮೂತ್ರದಲ್ಲೂ ಝಿಕಾ  ವೈರಾಣುಗಳಿರುವುದು ಪತ್ತೆಯಾಗಿದೆ. ಸೋಂಕಿಗೆ ಒಳಗಾಗಿರುವವರು ಮುತ್ತು ಕೊಡುವುದರಿಂದಲೂ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com