ನವದೆಹಲಿ: ಪಾಕಿಸ್ತಾನದ ಲಾಹೋರ್‌ವನಲ್ಲಿರುವ ಐತಿಹಾಸಿಕ ಜೈನ ದೇಗುಲವನ್ನು ತೆರವುಗೊಳಿಸಲಾಗಿದೆ .ಆರೆಂಜ್ ಲೈನ್ ಮೆಟ್ರೋ ಟ್ರೈನ್ (ಒಎಂಟಿ) ಯೋಜನೆಯ ಅಂಗವಾಗಿ ಈ ತೆರವು ಕಾರ್ಯ ನಡೆದಿದೆ.
ಜೈನ ದೇಗುಲ ಮಾತ್ರವಲ್ಲದೆ ಮಹಾರಾಜ ಕಟ್ಟಡ, ಕಪೂರ್ತಲಾ ಹೌಸ್ ಸೇರಿದಂತೆ ಹಲವಾರು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ದೇಗುಲವನ್ನು ತೆರವುಗೊಳಿಸುವ ಪಾಕಿಸ್ತಾನ ಸರ್ಕಾರದ ತೀರ್ಮಾನವನ್ನು ಪಂಜಾಬ್ ಅಸೆಂಬ್ಲಿಯ ವಿರೋಧ ಪಕ್ಷ ನಾಯಕ ಮಿಯಾ ಮೆಹಮೂದ್ ಉರ್ ರಶೀದ್ ಖಂಡಿಸಿದ್ದಾರೆ.
ಒಎಂಟಿಗಾಗಿ ಪಾಕ್ ಸರ್ಕಾರ ಬುಧವಾರ ದೇಗುಲವನ್ನು ತೆರವುಗೊಳಿಸಿದೆ. ಸುರಂಗ ಮಾರ್ಗವನ್ನು ನಿರ್ಮಿಸುವ ಮೂಲಕ ರೈಲ್ವೇ ಹಳಿ ನಿರ್ಮಿಸಬಹುದಿತ್ತು. ಹೀಗೆ ಮಾಡುತ್ತಿದ್ದರೆ ಚಾರಿತ್ರಿಕ ದೇಗುಲ ನಾಶವಾಗುತ್ತಿರಲಿಲ್ಲ ಎಂದು ರಶೀದ್ ಹೇಳಿದ್ದಾರೆ.
ಮೂರ ಮಹಡಿಗಳಿದ್ದ ಪುರಾತನ ದೇಗುಲ ಶಿಥಿಲಾವಸ್ಥೆಯಲ್ಲಿ ಇತ್ತು ಎನ್ನಲಾಗುತ್ತಿದೆ.
1992ರಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಪಾಕ್ ನಲ್ಲಿ ಈ ಜೈನ ದೇವಾಲಯದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಹಾನಿ ಮಾಡಿದ್ದರು.