ಅಮೆರಿಕ ಸುಪ್ರೀಂ ಕೋರ್ಟ್ ಗೆ ಭಾರತೀಯ ಮೂಲದ ಜಡ್ಜ್ ಶ್ರೀನಿವಾಸನ್ ನೇಮಕ?

ಚಂಡೀಗಢ ಮೂಲದ ಅಮೆರಿಕ ಪ್ರಜೆ ಶ್ರೀನಿವಾಸನ್ ಅಮೆರಿಕ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಮೊನ್ನೆ ಶನಿವಾರ ಅಮೆರಿಕ ಸರ್ವೋಚ್ಛ...
ಭಾರತೀಯ ಮೂಲದ ಅಮೆರಿಕ ನ್ಯಾಯಾಧೀಶ ಶ್ರೀನಿವಾಸನ್
ಭಾರತೀಯ ಮೂಲದ ಅಮೆರಿಕ ನ್ಯಾಯಾಧೀಶ ಶ್ರೀನಿವಾಸನ್

ವಾಷಿಂಗ್ಟನ್:  ಚಂಡೀಗಢ ಮೂಲದ ಅಮೆರಿಕ ಪ್ರಜೆ ಶ್ರೀನಿವಾಸನ್ ಅಮೆರಿಕ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಮೊನ್ನೆ ಶನಿವಾರ ಅಮೆರಿಕ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಂಟೋನಿನ್ ಸ್ಕಾಲಿಯಾ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಶ್ರೀನಿವಾಸನ್ ಅವರನ್ನು ನೇಮಿಸಲು ಅಧ್ಯಕ್ಷ ಬರಾಕ್ ಒಬಾಮಾ ಒಲವು ತೋರಿಸಿದ್ದಾರೆ ಎನ್ನಲಾಗಿದೆ.

ಶ್ರೀನಿವಾಸನ್ ನೇಮಕಗೊಂಡರೆ ಅಮೆರಿಕ ಸುಪ್ರೀಂ ಕೋರ್ಟ್ ಗೆ ನೇಮಕಗೊಂಡ ಮೊದಲ ಭಾರತೀಯ ನ್ಯಾಯಾಧೀಶರಾಗಲಿದ್ದಾರೆ. ಅಮೆರಿಕ ಸುಪ್ರೀಂ ಕೋರ್ಟ್ ನಲ್ಲಿ ಸುದೀರ್ಘ ಅವಧಿಗೆ ನ್ಯಾಯಾಧೀಶರಾಗಿದ್ದ ಖ್ಯಾತಿ ಹೊಂದಿದ್ದ ನ್ಯಾ ಆಟೊನಿನ್ ಸ್ಕೇಲಿಯಾ ಶನಿವಾರ ಟೆಕ್ಸಾಸ್ ನಲ್ಲಿ ಬೇಟೆಗೆಂದು ತೆರಳಿದ್ದ ವೇಳೆ ನಿಗೂಢವಾಗಿ ಸಾವನ್ನಪ್ಪಿದ್ದರು.

ಇದೀಗ ಹೊಸ ಜಡ್ಜ್ ಗಳ ನೇಮಕಕ್ಕೆ ಪಟ್ಟಿ ತಯಾರಿಸಲಾಗಿದ್ದು ಅವರಲ್ಲಿ ಶ್ರೀನಿವಾಸನ್ ಮುಂಚೂಣಿಯಲ್ಲಿದ್ದಾರೆ. ಚಂಡೀಗಢ ಮೂಲದ ಶ್ರೀನಿವಾಸನ್ ಯುಎಸ್ ಕೋರ್ಟ್ ಆಫ್ ಅಪೀಲ್ ಫಾರ್ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾದ ಸದಸ್ಯರು. ಶ್ರೀನಿವಾಸನ್ ಅವರು ಡೆಮಾಕ್ರೆಟ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳ ಬೆಂಬಲ ಪಡೆಯುವ ಸಾಧ್ಯತೆ ನಿಚ್ಛಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com