2 ವರ್ಷದವನಿದ್ದಾಗ ಮಾಡಿದ ನಾಲ್ಕು ಕೊಲೆಗಾಗಿ ನಾಲ್ಕು ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ!

ಎರಡು ವರ್ಷದವನಿದ್ದಾಗ ನಡೆದ ನಾಲ್ಕು ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷದ ಬಾಲಕನಿಗೆ ಈಜಿಪ್ಟ್ ನ ಕೈರೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೈರೋ: ಎರಡು ವರ್ಷದವನಿದ್ದಾಗ ನಡೆದ ನಾಲ್ಕು ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷದ ಬಾಲಕನಿಗೆ ಈಜಿಪ್ಟ್ ನ ಕೈರೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಹಮದ್ ಮನ್ಸೌರ್ ಕರ್ನಿ ಎಂಬ ಹೆಸರಿನ ಬಾಲಕನನ್ನು ಈ ವಾರ ಸಾಮೂಹಿಕ ವಿಚಾರಣೆ ನಡೆದ ಸಂದರ್ಭದಲ್ಲಿ ಆತನ ಅನುಪಸ್ಥಿತಿಯಲ್ಲಿ ಪಶ್ಚಿಮ ಕೈರೋದ ಮಿಲಿಟರಿ ನ್ಯಾಯಾಲಯ ಬಾಲಕನನ್ನು ಕೊಲೆ ಶಾಂತಿ ಕದಡುವಿಕೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಪ್ರಕರಣದಲ್ಲಿ  ದೋಷಿಯೆಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.

ಜನವರಿ 2014 ರಕಲ್ಲಿ ಕೈರೋದ ದಕ್ಷಿಣಕ್ಕೆ 70 ಕಿಮೀ ದೂರದಲ್ಲಿರುವ  ಫಾಯೋಮ್ ಪ್ರಾಂತ್ಯದಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿದ 116 ಮಂದಿಯಲ್ಲಿ ಅಹಮದ್ ಮನ್ಸೌರ್ ಕರ್ನಿ ಕೂಡ ಒಬ್ಬನಾಗಿದ್ದಾನೆ.

ಬಾಲಕನ ಹೆಸರನ್ನು ಆರೋಪಿಗಳ ಪಟ್ಟಿಗೆ ಅಧಿಕಾರಿಗಳು ಸೇರಿಸಿದ ನಂತರ ಜನನ ಪ್ರಮಾಣ ಪತ್ರವನ್ನು ಸಲ್ಲಿಸಲಾಗಿತ್ತು. ಆದರೇ ಅಷ್ಟರಲ್ಲಿ ಪ್ರಕರಣವನ್ನು ಮಿಲಿಟರಿ ಕೋರ್ಟ್ ಗೆ ವರ್ಗಾಯಿಸಲಾಗಿತ್ತು. ಬಾಲಕನ ಜನನ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದರೂ ಅದನ್ನು ನ್ಯಾಯಾಧೀಶರು ಓದಿಲ್ಲವೆಂದು ವಕೀಲ ಫೈಸಲ್-ಎ-ಸಯದ್ ಹೇಳಿದ್ದಾರೆ,

ಆರೋಪ ಪಟ್ಟಿಯಲ್ಲಿ ನಾಲ್ಕು ಕೊಲೆ, ಎರಡು ಕೊಲೆ ಯತ್ನಗಳು ಈಜಿಪ್ಟ್ ಆರೋಗ್ಯ ಇಲಾಖೆ ಆಸ್ತಿ ಪಾಸ್ತಿ ಹಾನಿಗೊಳಿಸಿರುವುದು, ಸೈನಿಕರನ್ನು ಹಾಗೂ ಪೊಲೀಸರನ್ನು ಬೆದರಿಸಿರುವುದು ಹಾಗೂ ಸುರಕ್ಷಾ ಪಡೆಗಳ ವಾಹನಗಳನ್ನು ಹಾನಿಗೊಳಿಸಲಾಗಿದೆ ಎಂದು ಸೇರಿಸಲಾಗಿದೆ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com