
ಲಂಡನ್: ಬ್ರಿಟನ್ ಸರ್ಕಾರ ದೇಶದ ವೀಸಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಸ್ತಾವನೆ ಮುಂದಿಟ್ಟಿದ್ದು, ಹೊಸ ಪ್ರಸ್ತಾವನೆಗಳ ಪ್ರಕಾರ ಯುರೋಪ್ ನ ನೌಕರರಿಗೆ ಆದ್ಯತೆ ನೀಡಲಾಗುತ್ತದೆ. ಬ್ರಿಟನ್ ಸರ್ಕಾರದ ಈ ಕ್ರಮದಿಂದ ಯುಕೆನಲ್ಲಿರುವ ಭಾರತೀಯ ವೈದ್ಯರು ನೌಕರಿ ಪಡೆಯುವುದಕ್ಕೆ ಕಷ್ಟಸಾಧ್ಯವಾಗಲಿದೆ.
ಯುರೋಪ್ ನ ನೌಕರರಿಗೆ ಆದ್ಯತೆ ನೀಡುವ ಉದ್ದೇಶದಿಂದ ಹೊಸ ಪರೀಕ್ಷಾ ವಿಧಾನವನ್ನು ಪರಿಚಯಿಸಿದ್ದು ಉದ್ಯಮಿಗಳು ಹೊರಗಿನಿಂದ ನೌಕರರನ್ನು ನೇಮಕ ಮಾಡಿಕೊಳ್ಳಲು ಮುಂದಾದರೆ ರೆಸಿಡೆಂಟ್ ಲೇಬರ್ ಮಾರ್ಕೆಟ್ ಟೆಸ್ಟ್ ನ್ನು ನಡೆಸಿರುವುದನ್ನು ದೃಢೀಕರಿಸಬೇಕಾಗುತ್ತದೆ.
ಯುರೋಪ್ ನ ನೌಕರರಿಗೆ ಆದ್ಯತೆ ನೀಡಲು ಆರ್ ಎಲ್ ಎಂ ಟಿಯ ಪ್ರಸ್ತಾವನೆ ನೀಡಿರುವ ಬ್ರಿಟನ್ ನ ವಲಸೆ ಸಲಹಾ ಸಮಿತಿ ಶಿಫಾರಸ್ಸಿನ ಪರಿಣಾಮ ಭಾರತೀಯ ವೈದ್ಯ ಪದವೀಧರರು ಯುಕೆ ರಾಷ್ಟ್ರೀಯ ಆರೋಗ್ಯ ಸೇವೆಯಡಿ ನೌಕರಿ ಪಡೆಯುವುದು ಕಷ್ಟಸಾಧ್ಯವಾಗಲಿದೆ.
"ಬ್ರಿಟನ್ ಸರ್ಕಾರ ತನ್ನ ದೇಶದ ವೈದ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಆದರೆ ಅದಕ್ಕೂ ಮುನ್ನ ಬ್ರಿಟನ್ ಸರ್ಕಾರದ ಪ್ರಸ್ತಾವನೆಯನ್ನು ಹಲವು ದೃಷ್ಟಿಕೋನದಿಂದ ವಿಮರ್ಶಿಸಬೇಕಿದೆ ಎಂದು ಕೆಲವು ವಿದೇಶಿ ಆಸ್ಪತ್ರೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಎಸ್.ಎಂ ಬಾಲಾಜಿ ಅಭಿಪ್ರಾಯಪಟ್ಟಿದ್ದಾರೆ.
Advertisement