ದೇಶದ ಉಗ್ರಗಾಮಿಗಳನ್ನು ಕೊನೆಗಾಣಿಸಲು ಪಣ ತೊಟ್ಟ ಪಾಕಿಸ್ತಾನ ಸೇನೆ

ಪಾಕಿಸ್ತಾನದಲ್ಲಿ ನಡೆಯುತ್ತಿರುವ 'ಜರ್ಬ್-ಎ-ಅಜಬ್' ಕಾರ್ಯಾಚರಣೆಯಿಂದ ಒದಗಿರುವ ಉಪಯೋಗಗಳು ಮತ್ತು ಪರಿಣಾಮಗಳ ಬಗ್ಗೆ ಬುಧವಾರ ತೃಪ್ತಿ ವ್ಯಕ್ತಪಡಿಸಿರುವ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ 'ಜರ್ಬ್-ಎ-ಅಜಬ್' ಕಾರ್ಯಾಚರಣೆಯಿಂದ ಒದಗಿರುವ ಉಪಯೋಗಗಳು ಮತ್ತು ಪರಿಣಾಮಗಳ ಬಗ್ಗೆ ಬುಧವಾರ ತೃಪ್ತಿ ವ್ಯಕ್ತಪಡಿಸಿರುವ ಪಾಕಿಸ್ತಾನದ ಸೇನಾ ಅಧ್ಯಕ್ಷ ಜನರಲ್ ರಶೀಲ್ ಶರೀಫ್ ತಮ್ಮ ದೇಶದಿಂದ ಎಲ್ಲ ಉಗ್ರಗಾಮಿಗಳನ್ನು ಮುಕ್ತಿಗೊಳಿಸಲು ಸೇನೆ ಪಣ ತೊಟ್ಟಿರುವುದಾಗಿ ಹೇಳಿದ್ದಾರೆ.

ಉಗ್ರಗಾಮಿಗಳ ವಿರುದ್ಧ ನಡೆಯುತ್ತಿರುವ 'ಜರ್ಬ್-ಎ-ಅಜಬ್' ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಲು ನೈಋತ್ಯ ಪರ್ವತಗಳೆಡೆಗೆ ಪ್ರವಾಸ ಮಾಡಿದ್ದ ಜನರಲ್ ರಶೀಫ್ ಮೇಲಿನ ಮಾತುಗಳನ್ನು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದ ಗಡಿಯಲ್ಲಿರುವ ಒಳ ಅರಣ್ಯ ಪ್ರದೇಶಗಳಾದ ಶವಲ್ ಕಣಿವೆ ಉಗ್ರರು ನುಸುಳುವ ನೆಚ್ಚಿನ ತಾಣವಾಗಿದೆ ಎಂದು 'ಜರ್ಬ್-ಎ-ಅಜಬ್' ಕಮ್ಯಾಂಡರ್, ಜನರಲ್ ರಶೀಫ್ ಅವರಿಗೆ ತಿಳಿಸಿದ್ದು, ಉತ್ತರ ವಾಜಿರಿಸ್ಥಾನದಲ್ಲಿ ಉಗ್ರರ ಅಟ್ಟಹಾಸವನ್ನು ಹತ್ತಿಕ್ಕುತ್ತಿರುವುದಾಗಿ ತಿಳಿಸಿದ್ದಾರೆ.

ಉತ್ತರ ವಾಜಿರಿಸ್ಥಾನದಲ್ಲಿ ಉಳಿದ ಉಗ್ರರ ನಾಶಕ್ಕೆ ಮುಂದುವರೆಯುವಂತೆ ಪಡೆಗಳಿಗೆ ಜನರಲ್ ಶರೀಫ್ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com