ಟಾಲ್ಕಂ ಪೌಡರ್ ಬಳಕೆಯಿಂದ ಕ್ಯಾನ್ಸರ್; 72 ಮಿಲಿಯನ್ ಡಾಲರ್ ಪರಿಹಾರ ಧನ ನೀಡಲು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಗೆ ಆದೇಶ

ಹಲವಾರು ದಶಕಗಳಿಂದ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಮತ್ತು ಶಾವರ್ ಟು ಶಾವರ್ ಬಳಸಿದ ಕಾರಣ ಅಂಡಾಶಯದ ಕ್ಯಾನ್ಸರ್‌ನಿಂದ...
ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್
ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್
ಮಿಸ್ಸೋರಿ: ಹಲವಾರು ದಶಕಗಳಿಂದ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್ ಮತ್ತು ಶಾವರ್ ಟು ಶಾವರ್ ಬಳಸಿದ ಕಾರಣ ಅಂಡಾಶಯದ ಕ್ಯಾನ್ಸರ್‌ನಿಂದ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ವಾದಿಸಿದ ಕುಟುಂಬಕ್ಕೆ 72 ಮಿಲಿಯನ್ ಡಾಲರ್ (ರು.4,941,388,800.00) ಪರಿಹಾರ ಧನ ನೀಡುವಂತೆ ಮಿಸ್ಸೋರಿ ನ್ಯಾಯಾಲಯ ಆದೇಶಿಸಿದೆ.
ಜಾಕ್ಲಿನ್ ಫಾಕ್ಸ್ ಎಂಬಾಕೆಯ ಕುಟುಂಬ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ವಿರುದ್ಧ ಕಾನೂನಿನ ಮೆಟ್ಟಿಲೇರಿತ್ತು. ಟಾಲ್ಕ್‌ಯುಕ್ತ ಉತ್ಪನ್ನಗಳು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡದೇ ಇರುವುದಕ್ಕೆ ನ್ಯಾಯಾಲಯ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಅಲಬಾಮಾದ ಬಿರ್ಮಿಂಗ್‌ಹ್ಯಾಮ್ ನಿವಾಸಿಯಾಗಿದ್ದ ಫಾಕ್ಸ್, ಸುಮಾರು 35 ವರ್ಷಗಳ ಕಾಲ ಬೇಬಿ ಪೌಡರ್ ಮತ್ತು ಶಾವರ್ ಟು ಶಾವರ್‌ನ್ನು ಬಳಸಿದ್ದರು. ಆಮೇಲೆ ಅವರಿಗೆ ಅಂಡಾಶಯದ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾಯಿತು. ಮೂರು ವರ್ಷಗಳ ಕಾಲ ಕ್ಯಾನ್ಸರ್ ಪೀಡಿತರಾಗಿದ್ದ ಫಾಕ್ಸ್  62ನೇ ವರ್ಷದಲ್ಲಿ ಸಾವಿಗೀಡಾಗಿದ್ದರು.
ಆಕೆಗೆ ಕ್ಯಾನ್ಸರ್ ಬರಲು ಜಾನ್ಸನ್ ಆ್ಯಂಡ್ ಜಾನ್ಸನ್ ಉತ್ಪನ್ನವೇ ಕಾರಣ ಎಂದು ಫಾಕ್ಸ್ ಕುಟುಂಬದ ವಕೀಲರು ವಾದಿಸಿದ್ದರು. ಈ ವಾದಕ್ಕೆ ವೈಜ್ಞಾನಿಕ ಸಾಕ್ಷ್ಯಗಳನ್ನು ವಕೀಲರು ಒದಗಿಸಿದ್ದು, ಇದನ್ನು ಪರಿಗಣಿಸಿದ ನ್ಯಾಯಾಲಯ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಫಾಕ್ಸ್ ಕುಟುಂಬಕ್ಕೆ ಪರಿಹಾರ ಧನ ನೀಡುವಂತೆ ಆದೇಶ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com