ಪಠಾಣ್ ಕೋಟ್ ದಾಳಿ: ಜಂಟಿ ತನಿಖಾ ತಂಡ ರಚಿಸಿದ ಪಾಕಿಸ್ತಾನ

ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಿದ ನಂತರ ಪಾಕಿಸ್ತಾನ ಜಂಟಿ ತನಿಖಾ ತಂಡವನ್ನು ರಚಿಸಿದೆ.
ಪಠಾಣ್ ಕೋಟ್ ವಾಯು ನೆಲೆ(ಸಂಗ್ರಹ ಚಿತ್ರ)
ಪಠಾಣ್ ಕೋಟ್ ವಾಯು ನೆಲೆ(ಸಂಗ್ರಹ ಚಿತ್ರ)
Updated on

ಇಸ್ಲಾಮಾಬಾದ್: ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಿದ ನಂತರ ಪಾಕಿಸ್ತಾನ ಜಂಟಿ ತನಿಖಾ ತಂಡವನ್ನು ರಚಿಸಿದೆ.
ಪಾಕಿಸ್ತಾನ ರಚಿಸಿರುವ ಜಂಟಿ ತನಿಖಾ ತಂಡ ಭಾರತಕ್ಕೆ ಭೇಟಿ ನೀಡಿ ಪಠಾಣ್ ಕೋಟ್ ವಾಯು ನೆಲೆಯಲ್ಲಿ ಸಾಕ್ಷ್ಯ ಸಂಗ್ರಹ ಮಾಡಲಿದೆ. ಪಂಜಾಬ್ ನ ಭಯೋತ್ಪಾದನಾ ನಿಗ್ರಹ ದಳದ ಹೆಚ್ಚುವರಿ ಐಜಿಪಿ ಮುಹಮ್ಮದ್ ತಾಹಿರ್ ರೈ, ಲಾಹೋರ್ ನ ಗುಪ್ತಚರ ಇಲಾಖೆಯ ಉಪ ನಿರ್ದೇಶಕ  ಮೊಹಮ್ಮದ್ ಅಜೀಂ ಅರ್ಷದ್, ಐಎಸ್ಐ ನ ಲೆಫ್ಟಿನೆಂಟ್ ಕರ್ನಲ್ ತನ್ವೀರ್ ಅಹ್ಮದ್, ಮಿಲಿಟರಿ ಗುಪ್ತಚರ, ಲೆಫ್ಟಿನೆಂಟ್ ಕರ್ನಲ್ ಇರ್ಫಾನ್ ಮಿರ್ಜಾ ಮತ್ತು ಗುಜ್ರಾನ್ವಾಲಾ ಸಿಟಿಡಿ ತನಿಖಾಧಿಕಾರಿ ಶಾಹಿದ್ ತನ್ವೀರ್ ತನಿಖಾ ತಂಡದಲ್ಲಿದ್ದಾರೆ.
ಈ ಹಿಂದೆ ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ವಿಶೇಷ ತನಿಖಾ ತಂಡ ರಚಿಸಿತ್ತು. ಜಂಟಿ ತನಿಖಾ ಸಂಸ್ಥೆಗೆ ಅಧಿಕಾರ ನೀಡಿದ ಕ್ಷಣದಿಂದ ಎಸ್ ಐ ಟಿ ನಿಷ್ಕ್ರಿಯವಾಗಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com