2016ರಲ್ಲಿ ಉಗ್ರರನ್ನು ಸಂಪೂರ್ಣ ಮಟ್ಟಹಾಕುತ್ತೇವೆ:ಪಾಕ್‌ ಸೇನಾ ಮುಖ್ಯಸ್ಥ

2016ರಲ್ಲಿ ಪಾಕಿಸ್ತಾನ ಭಯೋತ್ಪಾದನೆ ಮುಕ್ತ ದೇಶವಾಗಲಿದೆ ಎಂದು ಪಾಕ್‌ ಸೇನಾ ಮುಖ್ಯಸ್ಥ ರಹೀಲ್‌ ಶರೀಫ್ ಅವರು ಹೇಳಿದ್ದಾರೆ.
ರಹೀಲ್‌ ಶರೀಫ್
ರಹೀಲ್‌ ಶರೀಫ್
ಇಸ್ಲಾಮಾಬಾದ್‌: 2016ರಲ್ಲಿ ಪಾಕಿಸ್ತಾನ ಭಯೋತ್ಪಾದನೆ ಮುಕ್ತ ದೇಶವಾಗಲಿದೆ ಎಂದು ಪಾಕ್‌ ಸೇನಾ ಮುಖ್ಯಸ್ಥ ರಹೀಲ್‌ ಶರೀಫ್ ಅವರು ಹೇಳಿದ್ದಾರೆ.
ಹೊಸ ವರ್ಷದಲ್ಲಿ ಪಾಕಿಸ್ತಾನ ಸಂಪೂರ್ಣ ಭಯೋತ್ಪಾದನೆಯಿಂದ ಮುಕ್ತಿ ಕಾಣಲಿದೆ ಎಂದು ರಹೀಲ್‌ ಅವರು ಶುಕ್ರವಾರ ಹೇಳಿರುವುದಾಗಿ ಡಾನ್‌ ಆನ್‌ಲೈನ್‌ ವರದಿ ಮಾಡಿದೆ.
ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಮಟ್ಟ ಹಾಕುವ ಸೇನಾಪಡೆ ಯತ್ನಕ್ಕೆ ಇಡೀ ದೇಶ ಬೆಂಬಲ ನೀಡುವ ಅಗತ್ಯವಿದೆ ಎಂದು ರಹೀಲ್‌ ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಭಯೋತ್ಪಾದನೆಗೆ ಭ್ರಷ್ಟಾಚಾರ ಮತ್ತು ಅಪರಾಧದ ನಂಟಿದೆ. ಭಯೋತ್ಪಾದನೆ ಮತ್ತು ಹಣಕಾಸು ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಶಕ್ತಿಗಳು ಪರಸ್ಪರ ನಿಕಟ ಸಂಪರ್ಕ, ಸಹಕಾರವನ್ನು ಬೆಳೆಸಿಕೊಂಡು ತಮ್ಮ ಗುರಿ ಸಾಧಿಸುವುದಕ್ಕೆ ಪರಸ್ಪರ ನೆರವಾಗುತ್ತಿವೆ ಎಂದು ರಹೀಲ್‌ ಆರೋಪಿಸಿದ್ದಾರೆ.
ಭಯೋತ್ಪಾದನೆಯನ್ನು ಹಾಗೂ ಅದರೊಂದಿಗೆ ಶಾಮೀಲಾಗಿರುವ ಎಲ್ಲ ಋಣಾತ್ಮಕ ಶಕ್ತಿಗಳನ್ನು ಈ ವರ್ಷ ಸಂಪೂರ್ಣವಾಗಿ ಸೋಲಿಸಲಾಗುವುದು. 2016ರ ಹೊಸ ವರ್ಷವು ಪಾಕಿಸ್ತಾನದ ಮಟ್ಟಿಗೆ ರಾಷ್ಟ್ರೀಯ ಒಗ್ಗಟ್ಟು ಮತ್ತು ಏಕತೆಯ ವರ್ಷವಾಗಲಿದೆ. ಈ ಹೊಸ ವರ್ಷದಲ್ಲಿ ಪಾಕಿಸ್ಥಾನವು ಶಾಂತಿ ಮತ್ತು ನ್ಯಾಯದ ಹುಟ್ಟನ್ನು ಕಾಣಲಿದೆ ಎಂದು ರಹೀಲ್‌ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com